More

  ಕನಿಷ್ಠ ವೇತನ, ನೌಕರಿ ಕಾಯಂಗೊಳಿಸಿ

  ಕಾಗವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ,ಅಕ್ಷರದಾಸೋಹ ನೌಕರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಪರಿಮಳಾ ದೇಶಪಾಂಡೆಗೆ ಮನವಿ ಸಲ್ಲಿಸಿದರು.

  ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸುವರ್ಣಾ ಕಮತಗಿ ಮಾತನಾಡಿ, ಅಂಗನವಾಡಿ ನೌಕರರಿಗೆ 21 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ನೌಕರಿ ಕಾಯಂಗೊಳಿಸಬೇಕು. 10 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಪಡಿಸಬೇಕು. 2020ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು. ಎಲ್ಲರಿಗೂ ಪಿಂಚಣಿ ಒದಗಿಸಿ, ಎನ್‌ಪಿಎಸ್ ರದ್ದು ಮಾಡಿ, ಹಿಂದಿನ ಪಿಂಚಣಿ ಯೋಜನೆಯನ್ನು ಮರುಆರಂಭಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು. ಇಲಾಖೆಯಿಂದಲೇ ಕೋಳಿ ಮೊಟ್ಟೆ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

  ಸವಿತಾ ಹಿರೇಮಠ, ಆಕಾಶನಿ ಗುಂಜಾಳೆ, ರೂಪಾ ಸಲಗರೆ, ಅಂಜನಾ ಪಾಟೀಲ, ಅಂಜನಾ ಢಾಲೆ, ಕಲ್ಪನಾ ಕುಂಬಾರ, ಛಾಯಾ ಕಲೂತಿ, ಸವಿತಾ ಬಾಲಗೊಂಡ, ಸೋಮು ಕಟ್ಟಿ, ಸಾವಿತ್ರಿ ಕಾಂಬಳೆ, ಸುಮನ ಪಾಟೀಲ, ಇಂದುಮತಿ ಬೀಳಗಿ, ಶರಾವತಿ ಭಿಡೆ, ಸೀಮಾ ಕಾಂಬಳೆ, ಲಕ್ಷ್ಮೀ ಪಾಟೀಲ ಇದ್ದರು.

  ಚಿಕ್ಕೋಡಿ ವರದಿ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ನೌಕರರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ತಾಲೂಕು ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು. ಸಿಐಟಿಯು ತಾಲೂಕಾ ಘಟಕದ ಅಧ್ಯಕ್ಷ ದುಂಡಪ ಭಜನಾಯಿಕ, ಖಜಾಂಚಿ ಶಕುಂತಲಾ ಉರಣಿ, ಕಾರ್ಯದರ್ಶಿ ಶೈಲಜಾ ಮಾಳಿ, ಗುರುವ್ವಾ ಮಡಿವಾಳ,ಸಹ ಕಾರ್ಯದರ್ಶಿ ಭಾರತಿ ಸನದಿ, ಪಾರ್ವತಿ ದೇಶನೂರ,ಕುಮಾರ ಯಮಕನಮರಡಿ, ವಿದ್ಯಾ ಮಾಳಿ ಹಾಗೂ ಸಿಐಟಿಯು ಕಾರ್ಯಕರ್ತರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts