ಗಣಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಆರು ಸಾವಿರ ಸನಿಹ; ಗುರುವಾರ ಮತ್ತೆ 338 ಜನರಿಗೆ ಸೋಂಕು

blank

ಬಳ್ಳಾರಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ 338 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5974ಕ್ಕೇರಿದೆ.

ಬಳ್ಳಾರಿ ತಾಲೂಕಿನಲ್ಲಿ 115, ಹೊಸಪೇಟೆ 128, ಸಂಡೂರು 34, ಹಡಗಲಿ 28, ಸಿರಗುಪ್ಪ 11, ಕೂಡ್ಲಿಗಿ ಎಂಟು, ಹರಪನಹಳ್ಳಿ ಏಳು, ಹಬೊಹಳ್ಳಿ ತಾಲೂಕಿನಲ್ಲಿ ನಾಲ್ಕು ಹಾಗೂ ಇತರ ಜಿಲ್ಲೆಗಳ ಮೂರು ಜನರಿಗೆ ಸೋಂಕು ತಗುಲಿದೆ. ಗುರುವಾರ ಮೂರು ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 91ಕ್ಕೆ ತಲುಪಿದೆ. ಒಂದೇ ದಿನ 337 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬಳ್ಳಾರಿ ತಾಲೂಕಿನಲ್ಲಿ 2265, ಹೊಸಪೇಟೆ 1776, ಸಂಡೂರು 1058, ಸಿರಗುಪ್ಪ 246, ಹಡಗಲಿ 217, ಕೂಡ್ಲಿಗಿ 171, ಹಬೊಹಳ್ಳಿ 118, ಹರಪನಹಳ್ಳಿ 75, ಇತರ ರಾಜ್ಯದ 75 ಹಾಗೂ ಬೇರೆ ಜಿಲ್ಲೆಗಳ 23 ಜನರಲ್ಲಿ ಸೋಂಕು ಕಂಡುಬಂದಿದೆ. ಇದುವರೆಗೆ 2800 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 3083 ಸಕ್ರಿಯ ಪ್ರಕರಣಗಳಿವೆ.

ಮನೆ ಮನೆ ಸಮೀಕ್ಷೆ: ಬಳ್ಳಾರಿಯ ನಗರದಲ್ಲಿ ಕರೊನಾ ಸೋಂಕಿತರ ಪತ್ತೆಗಾಗಿ ಆರೋಗ್ಯ ಇಲಾಖೆಯಿಂದ ವಾರ್ಡ್ ಸಮೀಕ್ಷೆ ಕೈಗೊಳ್ಳಲಾಗಿದೆ. 13 ವಾರ್ಡ್‌ಗಳ 31895 ಮನೆಗಳ ಸಮೀಕ್ಷೆ ನಡೆಯಲಿದೆ. ಬುಧವಾರದವರೆಗೆ 6616 ಮನೆಗಳ ಸಮೀಕ್ಷೆ ನಡೆಸಲಾಗಿದೆ. ಈ ಮನೆಗಳಲ್ಲಿ 15 ವರ್ಷದೊಳಗಿನವರು 6416 ಹಾಗೂ 60 ವರ್ಷ ಮೇಲ್ಪಟ್ಟವರು 1775 ಜನರಿದ್ದಾರೆ. 112 ಗರ್ಭಿಣಿಯರು, 992 ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು, 15 ಜನರು ಇನ್‌ಫ್ಲ್ಯೂಯೆಂಜಾ ಮಾದರಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…