More

    ಗಾಣಿಗ ಸಮಾಜದ ನಿಗಮಕ್ಕೆ ಅನುದಾನ ನೀಡಲು ಆಗ್ರಹ

    ಯಲಬುರ್ಗಾ: ಗಾಣಿಗ ಸಮುದಾಯದ ನಿಗಮಕ್ಕೆ 500 ಕೋಟಿ ಅನುದಾನ ಹಾಗೂ ಮಂಡಳಿಗೆ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಜಿಲ್ಲಾ ಘಟಕದಿಂದ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

    ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

    ತಾಲೂಕಿನ ಬೇವೂರು ಗ್ರಾಮದ ಕೊಂಡದ ಮಲ್ಲೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಪಾದಯಾತ್ರೆ ವಣಗೇರಿ, ಚಿಕ್ಕಮ್ಯಾಗೇರಿ, ಕುಡಗುಂಟಿ, ಮಲಕಸಮುದ್ರ ಮಾರ್ಗವಾಗಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಜಮಾವಣೆಗೊಂಡಿತು.

    ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಆನಂದ ಮಂಡ್ಯ ಮಾತನಾಡಿ, ರಾಜ್ಯದಲ್ಲಿ ಗಾಣಿಗ ಸಮುದಾಯ ಅರವತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಹಿಂದುಳಿದ ಸಮುದಾಯವಾಗಿದ್ದು, ರಾಜಕೀಯ, ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ.

    ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಅದಕ್ಕೆ ಯಾವುದೇ ಅನುದಾನ ನೀಡಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ, ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

    ಪ್ರಮುಖರಾದ ಮಲ್ಲನಗೌಡ ಕೋನನಗೌಡ್ರ, ಅಯ್ಯನಗೌಡ ಕೆಂಚಮ್ಮನವರ್, ಆದೇಶ ರೊಟ್ಟಿ ಮಾತನಾಡಿ, ನಿಗಮದಿಂದ ಮಕ್ಕಳಿಗೆ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅನುಕೂಲವಾಗಲಿದ್ದು, ಸಿಎಂ, ಡಿಸಿಎಂ ಅನುದಾನ ಹಾಗೂ ಅಧ್ಯಕ್ಷರ ನೇಮಕ ವಿಚಾರ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು.

    ಮುದಾಯದ ಏಳಿಗೆಗಾಗಿ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು, ಬೇಡಿಕೆ ಈಡೇರಿಸಲು ಕಾಳಜಿ ತೋರಬೇಕು. ವಿಳಂಬ ನೀತಿ ಅನುಸರಿಸಿದರೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

    ಪ್ರಮುಖರಾದ ಅಮರೇಶ ಕುದರಿಮೋರಿ, ಹಿರೇಹನುಮಪ್ಪ ಬೊಮ್ಮನಾಳ, ಮಾರುತಿ ಚರಾರಿ, ಪರಶುರಾಮ, ಕರಿಬೀರಪ್ಪ ಮರಕಟ್, ಭೀಮಜ್ಜ ಗುರಿಕಾರ, ಮಹಾದೇವ ಸಜ್ಜನ, ಪ್ರಭುಗೌಡ ಕೀರ್ತಿಗೌಡ, ವೀರನಗೌಡ ಪಾಟೀಲ್, ಸಿದ್ದು ಕೆಂಪಳ್ಳಿ, ಸಂತೋಷ ಹಳ್ಳಿ, ಸಂಗಪ್ಪ ಗೊಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts