More

    ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

    ಹಾಸನ: ಶಾರ್ಪ್ ಶೂಟರ್ ವೆಂಕಟೇಶ್ ಅವರ ಸಾವಿಗೆ ಕಾರಣವಾದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹೆಚ್.ಎಸ್.ಗಣೇಶ್ ಹೊನ್ನವಳ್ಳಿ ಒತ್ತಾಯಿಸಿದರು.
    ಅರಣ್ಯಾಧಿಕಾರಿಗಳ ಬೇಜವಾಬ್ದಾರಿಯೇ ವೆಂಕಟೇಶ್ ಅವರ ಸಾವಿಗೆ ಕಾರಣವಾಗಿದೆ. ಹೀಗಾಗಿ ಸಿಸಿಎಫ್ ಆರ್.ರವಿಶಂಕರ್, ಡಿಎಫ್‌ಓ ಮೋಹನ್ ಕುಮಾರ್, ಎಸಿಎಫ್ ಪ್ರಭು ಹಾಗು ಆರ್‌ಎಫ್‌ಓ ಜಯವಂತ್ ಕಾಂಬ್ರೇಕರ್ ಅವರನ್ನು ಅಮಾನತುಗೊಳಿಸಬೇಕು ಎಂದು ಮುಖ್ಯಮಂತ್ರಿ, ಅರಣ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹೊರಗುತ್ತಿಗೆ ನೌಕರರಾಗಿದ್ದ ವೆಂಕಟೇಶ್ ಅವರನ್ನು ನಿವೃತ್ತಿ ನಂತರವೂ ಗಾಯಾಳು ಭೀಮ ಆನೆ ಕಾರ್ಯಾಚರಣೆಗೆ ಬಳಸಿಕೊಂಡಿದ್ದು ತಪ್ಪು. ನಿಯಮ ಉಲ್ಲಂಘನೆ ಮಾಡಿ ಆನೆ ಸೆರೆ ಕಾರ್ಯಾಚರಣೆ ನಡೆಸಿ ಅಮಾಯಕ ಶೂಟರ್ ವೆಂಕಟೇಶ್ ಅವರ ಸಾವಿನ ಕಾರಣವಾದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಕಾಡಾನೆ ಸೆರೆ ಕಾರ್ಯಾಚರಣೆಗೂ ಮುನ್ನ ಅನುಸರಿಸಬೇಕಾದ ನಿಯಮ ಪಾಲನೆ ಮಾಡದೇ ಇರುವುದು ವೆಂಕಟೇಶ್ ಸಾವಿಗೆ ಪ್ರಮುಖ ಕಾರಣವಾಗಿದೆ.   ಆದ್ದರಿಂದ ಮೃತದ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು. ಜೊತೆಗೆ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
    ಅರಿವಳಿಕೆ ಚುಚ್ಚುಮದ್ದು ನೀಡಲು ವೈದ್ಯರನ್ನು ಬಳಸಿಕೊಳ್ಳಬೇಕಿತ್ತು. ಆದರೆ, ನಿವೃತ್ತ ನೌಕರರನ್ನು ಬಳಸಿಕೊಂಡಿದ್ದು ಅಪರಾಧ. ಘಟನಾ ಸ್ಥಳದಲ್ಲಿ ಮೇಲಧಿಕಾರಿಗಳು ಇರಲಿಲ್ಲ. ಕಾರ್ಯಾಚರಣೆಗೆ ಕರೆಸಿದ್ದ ಪಳಗಿದ ಆನೆಗಳನ್ನು ಬಳಕೆ ಮಾಡಿರಲಿಲ್ಲ. ಹೀಗೆ ಸಾಕಷ್ಟು ವೈಫಲ್ಯಗಳು ಕಾಣುತ್ತವೆ. ಈ ಎಲ್ಲವನ್ನು ಮಂಗಳವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗು ಉಪ ಮುಖ್ಯಮಂತ್ರಿ, ಅರಣ್ಯ ಸಚಿವರಿಗೆ ಮನವರಿಕೆ ಮಾಡುವುದಾಗಿ ತಿಳಿಸಿದರು.
    ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts