More

    ಹಾಲು ಖರೀದಿ ದರ 2 ರೂಪಾಯಿ ಇಳಿಕೆ!

    ತಿಪಟೂರು: ಕರೊನಾ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಎಲ್ಲ ಉದ್ಯಮದ ಮೇಲೂ ಇದರ ಪ್ರಭಾವ ಬೀರಿದ್ದು, ಈಗಾಗಲೇ ಬಹುತೇಕ ಕಂಪನಿಗಳು ನಷ್ಟ ಸರಿದೂಗಿಸಲು ಉದ್ಯಮಿಗಳನ್ನು ಕೆಲಸದಿಂದ ತಗೆದು ಹಾಕಿವೆ. ಸಣ್ಣ-ಪುಟ್ಟ ಕಂಪನಿಗಳು, ವ್ಯಾಪಾರ ಮಳಿಗೆಗಳು ಬಾಗಿಲು ಹಾಕಿವೆ, ರೈತ ಬೆಳೆದ ಬೆಳೆಗೂ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಉಂಟಾಗುತ್ತಿದೆ. ಇದೀಗ ಹೈನೋದ್ಯಮದ ಮೇಲೂ ಕರೊನಾ ಛಾಯೆ ಆವರಿಸಿದ್ದು, ರೈತರಿಂದ ಖರೀದಿಸುವ ಹಾಲಿನ ದರವೂ ಕುಸಿತ ಕಂಡಿದೆ.

    ರೈತರಿಂದ ಖರೀದಿಸುವ ಪ್ರತಿ ಲೀಟರ್​ ಹಾಲಿಗೆ ತುಮಕೂರು ಹಾಲು ಒಕ್ಕೂಟ (ತುಮುಲ್​), ಆ.16ರಿಂದ ಮತ್ತೆ 2 ರೂಪಾಯಿ ಕಡಿತಗೊಳಿಸಿದೆ. ಫೆಬ್ರವರಿಯಲ್ಲಿ ಪ್ರತಿ ಲೀಟರ್​ಗೆ 28.50 ರೂಪಾಯಿ ನೀಡುತ್ತಿದ್ದ ತುಮುಲ್, ಮಾರ್ಚ್​ನಲ್ಲಿ 1 ರೂ. ಇಳಿಕೆ ಮಾಡಿತ್ತು. ಏಪ್ರಿಲ್​ ಮತ್ತು ಮೇ ನಲ್ಲಿ ಮತ್ತೆ 2.50 ರೂ. ಕಡಿತಗೊಳಿಸಿತ್ತು. ಆದರೂ ಮತ್ತೆ ಆ.16ರಿಂದ 2 ರೂಪಾಯಿ ಕಡಿಮೆ ಮಾಡಿದೆ. ಈವರೆಗೆ ಒಟ್ಟಾರೆ 5.50 ರೂ. ಇಳಿಕೆಯಾಗಿದ್ದು, ಪ್ರತಿ ಲೀಟರ್​ ಹಾಲು ಖರೀದಿ ದರ 23 ರೂಪಾಯಿಗೆ ಇಳಿದಿದೆ.

    ಇದನ್ನೂ ಓದಿರಿ ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ

    ಸದ್ಯ ತುಮುಲ್​ಗೆ ಪ್ರತಿನಿತ್ಯ 8.54 ಲಕ್ಷ ಲೀಟರ್​ ಹಾಲು ಹರಿದುಬರುತ್ತಿದೆ. ಕರೊನಾಕ್ಕೆ ಮುಂಚೆ 2 ಲಕ್ಷ ಲೀಟರ್​ ಹಾಲನ್ನು ಮುಂಬೈಗೆ ರವಾನೆ ಮಾಡಲಾಗುತ್ತಿತ್ತು. ಈಗ 50 ಸಾವಿರ ಲೀಟರ್​ಗೆ ಕುಸಿದಿದೆ. ಬೆಂಗಳೂರಿಗೆ 1.65 ಲಕ್ಷ ಲೀಟರ್​ ಹಾಲು ಪೂರೈಸಲಾಗುತ್ತಿದೆ. ತುಮಕೂರಿಗೆ 1.15 ಲಕ್ಷ ಲೀಟರ್​ ಹಾಲಿನ ಪೈಕಿ 1 ಲಕ್ಷ ಲೀಟರ್ ಹಾಲು ಮಾತ್ರವೇ ಮಾರಾಟವಾಗುತ್ತಿದೆ. ಮಾರ್ಚ್​ ನಿಂದ ಇಲ್ಲಿಯವರೆಗೆ ಒಕ್ಕೂಟ ಅಂದಾಜು 23 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ನಷ್ಟಭರಿಸಲಾಗದೆ ಹೈರಾಣಾಗಿರುವ ತುಮುಲ್​, ರೈತರಿಂದ ಹಾಲು ಖರೀದಿ ದರವನ್ನು ಸತತವಾಗಿ ಕಡಿಮೆ ಮಾಡುತ್ತಲೇ ಇದೆ. ಹಾಲಿಗೆ ಬೇಡಿಕೆ ಹೆಚ್ಚಾದರೆ ದರ ಯಥಾಸ್ಥಿತಿ ಆಗಲಿದೆ ಎಂದು ತುಮುಲ್​ ತಿಳಿಸಿದೆ.

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts