More

    ಮತ್ತೆ ಸೇನೆಯ ಹಿಡಿತಕ್ಕೆ ಜಾರಿದ ಮ್ಯಾನ್ಮಾರ್… ಚುನಾಯಿತ ನಾಯಕರು ಬಂಧನದಲ್ಲಿ !

    ಯಾನ್​ಗೊನ್​: ಮ್ಯಾನ್ಮಾರ್​ನಲ್ಲಿ ಸೇನೆಯು ಅಧಿಕಾರ ವಹಿಸಿಕೊಂಡಿದ್ದು, ದೇಶದಲ್ಲಿ ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಚುನಾಯಿತ ನಾಯಕಿ ಔಂಗ್ ಸನ್ ಸೂ ಕ್ಯೀ, ಅಧ್ಯಕ್ಷ ವಿನ್ ಮಿಯಿಂಟ್ ಮತ್ತು ಇತರ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

    ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದಿದ್ದ ಸೂ ಕ್ಯೀ ಸರ್ಕಾರವು ತನ್ನ ಮೊದಲನೇ ಸಂಸತ್ ಅಧಿವೇಶನ ನಡೆಸಬೇಕಿದ್ದ ಸೋಮವಾರದ ಬೆಳಗಿನ ಜಾವ ಸೇನೆ ಈ ಕ್ರಮ ಕೈಗೊಂಡಿದೆ. ನ್ಯಾಷನಲ್ ಲೀಗ್ ಫಾರ್ ಡೆಮೊಕ್ರೆಸಿ(ಎನ್​ಎಲ್​ಡಿ)ಯ ವಕ್ತಾರ ಮ್ಯೋ ನ್ಯುಂಟ್ ಈ ಬಗ್ಗೆ ದೂರವಾಣಿ ಮೂಲಕ ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.

    ಸೂ ಕ್ಯೀ, ಅಧ್ಯಕ್ಷ ವಿನ್ ಮಿಯಿಂಟ್ ಮತ್ತು ಇತರ ನಾಯಕರನ್ನು ರಾಜಧಾನಿಯಾದ ನೆಪ್ಯಿಡಾವ್​ನಲ್ಲಿ ಬಂಧನದಲ್ಲಿರಿಸಲಾಗಿದೆ. ಸೇನಾ ಪಡೆಗಳು ರಾಜಧಾನಿಯ ರಸ್ತೆಗಳನ್ನು ಆವರಿಸಿಕೊಂಡಿದ್ದು, ಸೇನಾ ಹೆಲಿಕಾಪ್ಟರ್​ಗಳು ನಗರದ ಸುತ್ತ ಹಾರಾಡುತ್ತಿವೆ. ಕರೆನ್ ರಾಜ್ಯದ ,ಮುಖ್ಯಮಂತ್ರಿ ಮತ್ತು ಇತರ ಪ್ರಾದೇಶಿಕ ಸಚಿವರನ್ನೂ ಬಂಧನಕ್ಕೊಳಪಡಿಸಲಾಗಿದೆ. ಡೆಮಾಕ್ರೆಸಿ ಪಕ್ಷದ ನಾಯಕರಿಗೆ ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಅಮೆರಿಕ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ಈ ಬೆಳವಣಿಗೆಯನ್ನು ಖಂಡಿಸಿವೆ.

    ಇದನ್ನೂ ಓದಿ: ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

    ಬಹುತೇಕ ಸೇನಾ ಆಡಳಿತದಲ್ಲಿದ್ದ ಮ್ಯಾನ್ಮಾರ್, 2011 ರಲ್ಲಿ ಮೊದಲ ಚುನಾಯಿತ ಸರ್ಕಾರವನ್ನು ಪಡೆದಿತ್ತು. ನವೆಂಬರ್ 2020 ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಸೂ ಕ್ಯೀ ನಾಯಕತ್ವದ ಎನ್​ಎಲ್​ಡಿ ಪಕ್ಷ ಶೇ.80 ರಷ್ಟು ಮತಗಳಿಂದ ಗೆದ್ದಿತ್ತು. ಆದರೆ ಸೇನೆಯು ಈ ಚುನಾವಣೆಯಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿತ್ತು. ಕಳೆದ ವಾರ ಸೇನೆಯ ಈ ಆರೋಪಗಳನ್ನು ತಳ್ಳಿಹಾಕಿದ್ದ ಮ್ಯಾನ್ಮಾರ್​ನ ಚುನಾವಣಾ ಆಯೋಗವು ಮತದಾನವು ಪಾರದರ್ಶಕವಾಗಿ ನ್ಯಾಯಯುತವಾಗಿ ನಡೆದಿದೆ ಎಂದು ಹೇಳಿತ್ತು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts