More

    ಸೇನಾನಿಗಳ ತ್ಯಾಗ ಶ್ಲಾಘನೀಯ

    ಕಕ್ಕೇರಿ: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಪೊಲೀಸ್ ಇಲಾಖೆ, ಮಾಧ್ಯಮ ಮಿತ್ರರ ಸಹಕಾರದಿಂದ ಖಾನಾಪುರ ತಾಲೂಕಿನಲ್ಲಿ ಕರೊನಾ ಹಾವಳಿ ಇಲ್ಲವಾಗಿದೆ ಎಂದು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.

    ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡವರು ಹಾಗೂ ಕೂಲಿಕಾರರು, ಕೃಷಿಕರಿಗೆ ಅಂಜಲಿತಾಯಿ ಫೌಂಡೇಷನ್ ವತಿಯಿಂದ ಅಕ್ಕಿ, ಗೋಧಿ, ಬೇಳೆ, ಅಡುಗೆ ಎಣ್ಣೆ, ಮಾಸ್ಕ್, ಸೋಪು ವಿತರಿಸಿ ಅವರು ಮಾತನಾಡಿದರು.

    ಗ್ರಾಮ ಪಂಚಾಯಿತಿ ಸದಸ್ಯ ಸಿ.ಬಿ. ಅಂಬೋಜಿ ಮಾತನಾಡಿ, ಕರೊನಾ ಸಾಂಕ್ರಾಮಿಕ ರೋಗದಿಂದ ದೂರವಿರಲು ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಚಿಕ್ಕ ಮಕ್ಕಳು, ವೃದ್ಧರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಕರೊನಾ ಸೇನಾನಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಶ್ರೀ ಹಟ್ಟಿ ಹಾಗೂ ಪಿಡಿಒ ಎಸ್.ಎಂ.ಬೊಂಗಾಳೆ ಮಾತನಾಡಿದರು. ಆಜಾದ್ ಸೌದಾಗರ ಸ್ವಾಗತಿಸಿದರು. ಬಸವರಾಜ ಅಂಬಡಗಟ್ಟಿ ಹಾಗೂ ಇಲಿಯಾಸ್ ಮುಲ್ಲಾ ನಿರೂಪಿಸಿದರು. ಮಲ್ಲಿಕಾರ್ಜುನ ಕುಕಡೊಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts