More

    ರಾಹುಲ್​ ಗಾಂಧಿ ಮಾತನಾಡಿಸಿದ್ದಕ್ಕೆ ವಲಸೆ ಕಾರ್ಮಿಕರ ಬಂಧನ?

    ನವದೆಹಲಿ: ತಮ್ಮ ಊರುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಜತೆ ಮಾತನಾಡಿದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    ನವದೆಹಲಿಯ ಸುಖದೇವ್​ ವಿಹಾರ್​ ಮೇಲ್ಸೇತುವೆ ಮೇಲೆ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಇದನ್ನು ಗಮನಿಸಿದ ರಾಹುಲ್​ ಗಾಂಧಿ, ಅವರೊಂದಿಗೆ ಮಾತನಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದಲ್ಲದೆ, ಅವರ ಅಹವಾಲುಗಳನ್ನು ಕೇಳಿಕೊಂಡರು. ಇದು ಕೇಂದ್ರ ಸರ್ಕಾರವನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಶ್ರಮಿಕ್ ರೈಲಿನಲ್ಲಿ ಬಂದ 1241 ವಲಸಿಗರು

    ರಾಹುಲ್​ ಗಾಂಧಿ ಜತೆ ಅವರೆಲ್ಲರೂ ಮಾತನಾಡಿದ ಬಳಿಕ ಅವರವರ ಊರುಗಳಿಗೆ ಕಳುಹಿಸಿಕೊಡಲು ಕಾಂಗ್ರೆಸ್​ ವತಿಯಿಂದ ವಾಹನಗಳನ್ನು ವ್ಯವಸ್ಥೆ ಮಾಡಲಾಯಿತು. ಆ ವಾಹನಗಳು ಸ್ಥಳಕ್ಕೆ ಬಂದಾಗ, ಅವನ್ನು ಹತ್ತದಂತೆ ವಲಸೆ ಕಾರ್ಮಿಕರನ್ನು ಪೊಲೀಸರು ತಡೆದರು ಎಂದು ದೂರಿದ್ದಾರೆ.

    ಆದರೆ, ಲಾಕ್​ಡೌನ್​ ನಿಯಮ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸುವ ಸಲುವಾಗಿ ಸಾಮೂಹಿಕವಾಗಿ ವಾಹನದಲ್ಲಿ ಪ್ರಯಾಣಿಸದಂತೆ ಇವರೆಲ್ಲರನ್ನೂ ತಡೆದಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

    ರಾಜ್ಯದಲ್ಲಿ ಸಕ್ರಿಯ ಕರೊನಾ ಕೇಸ್​ಗಳು 559, ಮರಣ ಸಂಖ್ಯೆ 36; 13 ಮಂದಿ ಐಸಿಯುವಿನಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts