More

    2280 ವಲಸೆ ಕಾರ್ಮಿಕರ ನಿರ್ಗಮನ

    ಮಂಗಳೂರು: ಕಾರ್ಮಿಕರನ್ನು ಸಾಗಿಸುವ ಎರಡು ರೈಲುಗಳು ಭಾನುವಾರ ಮಂಗಳೂರಿನಿಂದ ತೆರಳಿವೆ.
    ಭಾನುವಾರ ಮಧ್ಯಾಹ್ನ ಉತ್ತರ ಪ್ರದೇಶಕ್ಕೆ 1140 ಕಾರ್ಮಿಕರನ್ನು ಸಾಗಿಸುವ ರೈಲು ಮಂಗಳೂರು ಜಂಕ್ಷನ್‌ನಿಂದ ಹೊರಟಿತು. ಸಂಜೆ ಅಷ್ಟೇ ಸಂಖ್ಯೆಯ ಪ್ರಯಾಣಿಕರನ್ನು ಬಿಹಾರಕ್ಕೆ ಸಾಗಿಸುವ ಇನ್ನೊಂದು ರೈಲು ಕೂಡ ಹೊರಟಿದೆ.
    ಉತ್ತರ ಪ್ರದೇಶಕ್ಕೆ ಹೋಗುವವರಿಗೆ ನಗರದ ಬಂದರ್, ಬಾಂಬೆ ಹೋಟೆಲ್, ಕಂಡತ್‌ಪಳ್ಳಿ, ಕುದ್ರೋಳಿ, ಕಂಕನಾಡಿ, ಉಳ್ಳಾಲ ಹಾಗೂ ಬಿಹಾರಕ್ಕೆ ಹೋಗುವವರಿಗೆ ಪಣಂಬೂರು, ಜೋಕಟ್ಟೆ ಈ ಸ್ಥಳಗಳಿಂದ ವಲಸೆ ಕಾರ್ಮಿಕರನ್ನು ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಸುಮಾರು 23 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ಬಸ್ಸಿಗೆ ಒಬ್ಬರು ಜಿಲ್ಲಾಮಟ್ಟದ ಅಧಿಕಾರಿಯನ್ನು ಮೇಲ್ವಿಚಾರಕರಾಗಿ ನೇಮಿಸಿ, ಅವರಿಗೆ ಒಬ್ಬರು ಗ್ರಾಮಕರಣಿಕರು ಹಾಗೂ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು.

    ಬಸ್ಸು ಹತ್ತುವ ಮೊದಲೇ ಅವರ ಎಲ್ಲ ವಿವರ ಸಂಗ್ರಹಿಸಿ, ನಂತರ ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕಾಗಿ ಸುಸಜ್ಜಿತ ಆರೋಗ್ಯ ತಂಡವನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮೇಲ್ವಿಚಾರಣೆಯಲ್ಲಿ ನಡೆದ ಈ ಸಂಚಾರ ಪ್ರಕ್ರಿಯೆಯಲ್ಲಿ ಭಾಗವಹಿಸಲು, ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಬೆಳಿಗ್ಗೆ 7 ಗಂಟೆಯಿಂದಲೇ ಕರ್ತವ್ಯದಲ್ಲಿ ತೊಡಗಿದ್ದರು. ಜಿಲ್ಲೆಯಿಂದ ವಲಸೆ ಕಾರ್ಮಿಕರ ಮೊದಲ ರೈಲು ಮೇ9ರಂದು ಜಾರ್ಖಂಡ್‌ನ ಬೊಕಾರೊಗೆ ತೆರಳಿತ್ತು.

    ಮೇ 9 ಹಾಗೂ 10ರಂದು ಅನುಮತಿ ಪಡೆದ ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಬಿಹಾರದ 3420 ವಲಸೆ ಕಾರ್ಮಿಕರನ್ನು ಸ್ವರಾಜ್ಯಕ್ಕೆ ಕಳುಹಿಸಲಾಗಿದೆ. ದ.ಕ ಜಿಲ್ಲೆಗೆ ಹೊರ ರಾಜ್ಯದ ಪ್ರಯಾಣಿಕರು ಆಗಮಿಸಬೇಕಾದರೆ ಕಡ್ಡಾಯವಾಗಿ ಸೇವಾಸಿಂಧು ಪಾಸ್ ಹೊಂದಿರಬೇಕು. ಚೆಕ್‌ಪೋಸ್ಟ್ ಮೂಲಕ ಬರಲು ಅವಕಾಶವಿದೆ. ಹೊರರಾಜ್ಯದಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ ಸಾಂಸ್ಥಿಕ ನಿಗಾವಣೆ ಮಾಡಲಾಗುವುದು.
    ಸಿಂಧೂ ಬಿ.ರೂಪೇಶ್, ದ.ಕ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts