More

    ಕಿವಿಯೋಲೆ ವಿಚಾರದಲ್ಲಿ ಅಜ್ಜಿಗೆ ಮೋಸ ಮಾಡಲಿಲ್ಲ ಭೂತಾಯಿ!

    ವೃದ್ಧೆ ನಾರಾಯಣಿ ವೇಲ್ಯಮ್ಮಾ ಎಂಬುವರು 20 ವರ್ಷಗಳ ಹಿಂದೆ ಭತ್ತದ ಗದ್ದೆಯಲ್ಲಿ ಕಳೆದುಕೊಂಡಿದ್ದ ಕಿವಿಯೋಲೆ ಈಗ ಮತ್ತೆ ಅವರ ಕೈ ಸೇರಿದೆ. ಅದಕ್ಕೆ ಕಾರಣ ಮಹಾತ್ಮಾ ಗಾಂಧಿ ನರೇಗಾ ಕೂಲಿ ಕಾರ್ಮಿಕರು.

    ಕೇರಳದ ಬೇಡಡ್ಕಾ ಗ್ರಾಪಂ ವ್ಯಾಪ್ತಿಯ ಎಡಾಂಪೂರಾಡಿ ನಿವಾಸಿಯಾಗಿರುವ ನಾರಾಯಣಿ ಅವರು 20 ವರ್ಷಗಳ ಹಿಂದೆ, ತಾವು ಕೈಯಾರೆ ಬೆಳೆದಿದ್ದ ಸುಮಾರು 24 ಕೆಜಿ ಭತ್ತವನ್ನು ಮಾರಿ, ಬಂದ ಹಣದಲ್ಲಿ ಬಂಗಾರದ ಕಿವಿಯೋಲೆ ಖರೀದಿಸಿದ್ದರು. ಆದರೆ ಹೀಗೆ ಮತ್ತೊಂದು ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅದರಲ್ಲೊಂದು ಬಿದ್ದು, ಕಳೆದುಹೋಗಿತ್ತು. ನಂತರ ಅವರೆಷ್ಟೇ ಹುಡುಕಿದರೂ ಅದು ಸಿಕ್ಕಿರಲಿಲ್ಲ. ಇದನ್ನೂ ಓದಿ: ಕರುಣೆ ಬೇಡ, ಶಿಕ್ಷೆ ಎದುರಿಸಲು ಸಿದ್ಧ: ‘ಅಪರಾಧಿ’ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿಕೆ

    ಇದೀಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸುಭಿಕ್ಷ ಕೇರಳದ ಭಾಗವಾಗಿ ಕೆಲವು ಮಹಿಳಾ ಕಾರ್ಮಿಕರು ಹೊಲವನ್ನು ಉಳುಮೆ ಮಾಡುತ್ತಿದ್ದರು. ಆಗ ಮಹಿಳಾ ಕಾರ್ಮಿಕರೋರ್ವರಲ್ಲಿ ಬೇಬಿ ಎಂಬುವರಿಗೆ ಈ ಕಿವಿಯೋಲೆ ಸಿಕ್ಕಿತು. ಅದು ಪೂರ್ತಿಯಾಗಿ ಮಣ್ಣಿನಿಂದ ಕೂಡಿತ್ತು. ಆದರೆ ಬಂಗಾರವೆಂದು ಗೊತ್ತಾದ ಮಹಿಳೆಯರು ಅದನ್ನು ಸ್ವಚ್ಛಗೊಳಿಸಿದರು. ಅದು ಅಂದು ನಾರಾಯಣಿ ಅವರು ಕಳೆದುಕೊಂಡ ಕಿವಿಯೋಲೆಯೇ ಆಗಿತ್ತು. ಅವರ ಮಗಳು ಮಾಲಿನಿ ಅದನ್ನು ಗುರುತಿಸಿದರು. ಇದನ್ನೂ ಓದಿ: ಇಲಿ ಇಟ್ಟ ಬೆಂಕಿಗೆ ಸುಟ್ಟು ಕರಕಲಾದ ಕಚೇರಿ: 1 ಕೋಟಿ ಆಸ್ತಿ ನಷ್ಟ, ಸಿಸಿಟಿವಿಯಲ್ಲಿ ಇಲಿ ಕೃತ್ಯ ಬಯಲು!

    2000ರಲ್ಲಿ ಕಳೆದುಕೊಂಡ ಓಲೆಯ ಬೆಲೆ ಈಗ ಸುಮಾರು 10 ಪಟ್ಟು ಹೆಚ್ಚಾಗಿದೆ. ಹಾಗೇ ಅದು ನಾರಾಯಣಿಯವರ ಕೈ ಸೇರಿದೆ.
    ಸದ್ಯ ನಾರಾಯಣಿ ಅವರಿಗೆ 70 ವರ್ಷ ಆಗಿರಬಹುದು. ಅಂದು ಅವರ ಕಿವಿಯೋಲೆ ಕಳೆದ ವಿಷಯ ಸುತ್ತಮುತ್ತಲೆಲ್ಲ ಭರ್ಜರಿ ಸುದ್ದಿಯಾಗಿತ್ತು. ಈಗ ಮಹಿಳೆಯರು ಅವರ ಮನೆಗೆ ಹೋಗಿ, ಕುರ್ಚಿಯಲ್ಲಿ ಕೂರಿಸಿ, ಕಿವಿಯೋಲೆಯನ್ನು ಕೊಟ್ಟಿದ್ದಾರೆ. ಇದರಿಂದ ಅಜ್ಜಿ ಕೂಡ ಫುಲ್ ಖುಷಿಯಾಗಿದ್ದಾರೆ. ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ. (ಏಜೆನ್ಸೀಸ್​)

    ಗನ್​ಮ್ಯಾನ್ ಆಗಿದ್ದವನು ಆರ್​ಟಿಒ ಇನ್ಸ್​ಪೆಕ್ಟರ್ ಆಗಿದ್ದಾನೆ: ಎಚ್.ಡಿ.ರೇವಣ್ಣ ಕೆಂಗಣ್ಣು ಯಾರ ಮೇಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts