More

    ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಮೆಟ್ರೊಮ್ಯಾನ್​ ಶ್ರೀಧರನ್​ ಸಕ್ರಿಯ ರಾಜಕಾರಣಕ್ಕೆ ವಿದಾಯ

    ತಿರುವನಂತಪುರಂ: ಕೇರಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಂಬಿತವಾಗಿದ್ದ ಮೆಟ್ರೊಮ್ಯಾನ್​ ಈ. ಶ್ರೀಧರನ್​ ಸಕ್ರಿಯ ರಾಜಕಾರಣವನ್ನು ತೊರೆಯುತ್ತಿರುವುದಾಗಿ ಇಂದು ಘೋಷಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ಸೇರಿ ಒಂದು ವರ್ಷ ಕಳೆಯುವುದಕ್ಕೂ ಮುಂಚೆಯೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

    ಕೇರಳದ ಮಲಪ್ಪುರಂನಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಶ್ರೀಧರನ್​, ನಾನು ಯಾವಾಗಲೂ ರಾಜಕಾರಣಿಯಾಗಿರಲಿಲ್ಲ. ಆದರೆ ರಾಜಕೀಯದಲ್ಲಿ ಸಕ್ರಿಯವಾಗಿರುವುದಿಲ್ಲ ಎಂದ ಮಾತ್ರಕ್ಕೆ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದರ್ಥವಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕಾಲುವೆಗೆ ಬಿದ್ದ ಟ್ರ್ಯಾಕ್ಟರ್ ಪಲ್ಟಿ; ಜಮೀನಿಗೆ ಹೊರಟ ಚಾಲಕ ಸ್ಥಳದಲ್ಲೇ ಸಾವು…

    ಕಳೆದ ಏಪ್ರಿಲ್​ನಲ್ಲಿ ನಡೆದ ಚುನಾವಣೆಯಲ್ಲಿ ಪಲಕ್ಕಾಡ್​ ವಿಧಾನಸಭಾ ಕ್ಷೇತ್ರಕ್ಕಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್​ ಅವರನ್ನು ಕೇರಳದ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಆದರೆ ಬಳಿಕ ಅವರು ಶಾಸಕ ಶಫಿ ಪರಂಬಿಲ್​​ ವಿರುದ್ಧ 3,859 ಮತಗಳಿಂದ ಪರಾಭವ ಕಂಡಿದ್ದರು.

    ಇದನ್ನೂ ಓದಿ: ಯುವಕನ ಬರ್ಬರ ಕೊಲೆ: ಕರೆ ಮಾಡಿ ಕರೆಸಿಕೊಂಡು ಚಾಕುವಿನಿಂದ ಚುಚ್ಚಿದ್ರು, ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಹಾಕಿದ್ರು..

    ನಾನು ಸೋತಾಗ ಬೇಸರವಾಗಿತ್ತು. ಆದರೆ, ಆ ಸಮಯ ಈಗ ಕಳೆದಿದೆ. ನನಗೀಗ 90 ವರ್ಷ. ರಾಜಕೀಯದಲ್ಲಿ ಹೆಚ್ಚು ತೊಡಗಿಕೊಳ್ಳುವುದು ಅಪಾಯಕಾರಿ. ನನ್ನ ನೆಲದ ಸೇವೆ ಮಾಡಲು ನನಗೆ ರಾಜಕೀಯದ ಅಗತ್ಯವಿಲ್ಲ. ಮೂರು ಟ್ರಸ್ಟ್​ಗಳ ಮೂಲಕ ನಾನಾಗಲೇ ಅದನ್ನು ಮಾಡುತ್ತಿದ್ದೇನೆ ಎಂದು ಶ್ರೀಧರನ್​ ತಿಳಿಸಿದ್ದಾರೆ.

    ಸುದ್ದಿಯ ಶೀರ್ಷಿಕೆ ತಿರುಚಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು

    ಕುಡಿಯಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಗಂಡ; ಮನನೊಂದು ವಿಷ ಸೇವಿಸಿದ ಪತ್ನಿ-ಪುತ್ರಿ; ಸತಿಯ ಸಾವಿನ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts