More

    ಕ್ರಿಕೆಟ್ ಪ್ರಿಯರಿಗೆ ಬಂಪರ್ ಆಫರ್​ ನೀಡಿದ ‘ನಮ್ಮ ಮೆಟ್ರೋ’; ಆದ್ರೆ ಈ ನಿಯಮ ಕಡ್ಡಾಯ

    ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಜೂ.19) ರಂದು ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್ ಅಂಗವಾಗಿ ಮೆಟ್ರೋ ರೈಲು ಸಂಚಾರ ಅವಧಿಯಲ್ಲಿ ಮಧ್ಯರಾತ್ರಿ 1.30ರವರೆಗೂ ವಿಸ್ತರಣೆ ಮಾಡಲಾಗಿದೆ.

    ಸಾಮಾನ್ಯ ದಿನಗಳಲ್ಲಿ ಭಾನುವಾರ ಮೆಟ್ರೋ ರೈಲು ಸಂಚಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಗೆ ಪೂರ್ಣಗೊಳ್ಳುತ್ತದೆ. ಆದರೆ, ಜೂ.19 ರಂದು ಟಿ-20 ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಮೆಟ್ರೋ ರೈಲು ಸಂಚಾರ ಮಧ್ಯರಾತ್ರಿರವರೆಗೆ ವಾಣಿಜ್ಯ ಸೇವೆ ನೀಡಲಿವೆ ಎಂದು ಬಿಎಂಆರ್‌ಸಿಎಲ್ ಸಂಸ್ಥೆ ತಿಳಿಸಿದೆ. ಎಲ್ಲ ಟರ್ಮಿನಲ್‌ಗಳಿಂದ (ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ಕೇಂದ್ರೀಯ ರೇಷ್ಮೆ ಸಂಸ್ಥೆ) ರಾತ್ರಿ 1 ಗಂಟೆಗೆ ಕೊನೆಯ ರೈಲು ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಕೊನೆಯ ರೈಲು 1.30ಕ್ಕೆ ಹೊರಡಲಿದೆ.

    ಯಾವುದೇ ನಿಲ್ದಾಣಕ್ಕೆ ರೂ. 50 ರಿಟರ್ನ್ ಟಿಕೆಟ್: ಕ್ರಿಕೆಟ್ ವೀಕ್ಷಣೆಗೆ ಬಂದವರು ವಾಪಸ್ ಹೋಗುವಾಗ ಟಿಕೆಟ್ ಕೌಂಟರ್‌ನಲ್ಲಿ ಜನಸಂದಣಿ ಉಂಟಾಗುವುದನ್ನು ತಪ್ಪಿಸಲು ಮಧ್ಯಾಹ್ನ 3 ಗಂಟೆಯಿಂದಲೇ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತದೆ. ವಿಶೇಷವಾಗಿ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ರಿಟರ್ನ್ ಟಿಕೆಟ್ ಬೆಲೆ 50 ರೂ. ಆಗಿರುತ್ತದೆ.

    ಮುಖ್ಯವಾಗಿ, ಎಲ್ಲರೂ ರಿಟರ್ನ್ ಜರ್ನಿಗೆ ಪೇಪರ್ ಟಿಕೆಟ್ ಕಡ್ಡಾಯವಾಗಿ ಖರೀದಿಸಬೇಕು. ಸ್ಮಾರ್ಟ್ ಕಾರ್ಡ್ ಮತ್ತು ಟೋಕನ್‌ಗಳನ್ನು ಬಳಸಿ ಪ್ರಯಾಣಕ್ಕೆ ಅವಕಾಶವಿಲ್ಲ. ಆದರೆ, ಬೇರೆ ಮೆಟ್ರೋ ನಿಲ್ದಾಣಗಳಿಂದ ಕಬ್ಬನ್‌ಪಾರ್ಕ್ ಅಥವಾ ಇನ್ನಿತರೆ ನಿಲ್ದಾಣಕ್ಕೆ ತೆರಳಲು ಸ್ಮಾರ್ಟ್ ಕಾರ್ಡ್ ಅಥವಾ ಟೋಕನ್ ಬಳಸಬಹುದು ಎಂದು ಬಿಎಂಆರ್‌ಸಿಎಲ್ ಸಂಸ್ಥೆಯು ತಿಳಿಸಿದೆ.

    ತಂದೆ ಕೆಲಸ ಮಾಡಿದ ವಿವಿಯಲ್ಲೇ ಸ್ವರ್ಣ ಪದಕ; ಬೆಂಕಿಯಲ್ಲಿ ಅರಳಿದ ಚಿನ್ನದ ಹುಡುಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts