More

    ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: 10 ಕೋಟಿ ರೂ. ಪರಿಹಾರಕ್ಕೆ ಆಗ್ರಹ!

    ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿತಗೊಂಡು ಮಹಿಳೆ ಹಾಗೂ ಆಕೆಯ ಪುತ್ರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಾವಿಗೀಡಾದ ಮಹಿಳೆಯ ಪತಿ ಕೈಗೊಂಡ ಕಾನೂನುಕ್ರಮದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ತಿರುವು ಪಡೆದಿದೆ.

    ಬೆಂಗಳೂರಿನ ನಾಗವಾರ ಬಳಿ 2023ರ ಜ.10ರಂದು ಮೆಟ್ರೋ ಪಿಲ್ಲರ್ ಕುಸಿತಗೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆ ಹಾಗೂ ಆಕೆಯ ಪುತ್ರ ಸಾವಿಗೀಡಾಗಿದ್ದರು. ಈ ಸಂಬಂಧ ಆ ಮಹಿಳೆಯ ಪತಿ ಲೋಹಿತ್​ 10 ಕೋಟಿ ರೂ. ಪರಿಹಾರಕ್ಕೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ಎಂಟು ವರ್ಷದ ಈ ಬಾಲಕಿ ಟಿವಿ ನೋಡುವ ಸ್ಟೈಲೇ ವಿಚಿತ್ರ!; ವಿಡಿಯೋ ವೈರಲ್

    ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಬಿಎಂಆರ್​ಸಿಎಲ್​ ಸೇರಿದಂತೆ 8 ಪ್ರತಿವಾದಿಗಳಗೆ ಹೈಕೋರ್ಟ್​ ನೋಟಿಸ್ ಜಾರಿ ಮಾಡಿದೆ. ನ್ಯಾ.ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠದಿಂದ ನೋಟಿಸ್ ಜಾರಿಯಾಗಿದೆ.

    ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರವನ್ನು ಬಿಎಂಆರ್​​ಸಿಎಲ್ ಘೋಷಿಸಿತ್ತು. ಆದರೆ ಈ ಮೊತ್ತದ ಪರಿಹಾರ ಸೂಕ್ತವಲ್ಲ ಎಂದು ಲೋಹಿತ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದ್ದು, 2 ವಾರ ವಿಚಾರಣೆ ಮುಂದೂಡಲಾಗಿದೆ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts