More

    ಬಿಷಪ್ ಎನ್.ಎಲ್.ಕರ್ಕರೆ ವಿರುದ್ಧ ಆರೋಪ

    ಯಾದಗಿರಿ: ಮೆಥೋಡಿಸ್ಟ್ ಚರ್ಚ್​ ಧರ್ಮಾಧಿಕಾರಿ ಬಿಷಪ್ ಎನ್.ಎಲ್. ಕರ್ಕರೆ ಅವರಿಂದ ಕ್ರೈಸ್ತ ಸಮುದಾಯದ ಆಸ್ತಿಯನ್ನು ಅಕ್ರಮ ಮಾರಾಟಕ್ಕೆ ಕುಮ್ಮಕ್ಕು ನೀಡುವಂತಹ ಘಟನೆ ನಡೆಯುತ್ತಿವೆ ಎಂದು ಆರೋಪಿಸಿ ಮೆಥೋಡಿಸ್ಟ್ ಚರ್ಚ್​ ಸಭಾಸದರು ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಬಿಷಪ್ ಕರ್ಕರೆ ಸಂಸ್ಥೆಯನ್ನು ರಾಜ್ಯದಲ್ಲಿ ಬೆಳೆಸುವ ಬದಲಿಗೆ ಸಂಸ್ಥೆ ಆಸ್ತಿಯನ್ನು ಅಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಮೆಥೋಡಿಸ್ಟ್ ಚಚರ್್ನ ಆಸ್ತಿ ಮಾರಾಟ ನಿರಂತರವಾಗಿ ನಡೆಯುತ್ತಿದ್ದು ಇದರಿಂದ ಸಮುದಾಯಕ್ಕೆ ನಷ್ಟವಾಗುತ್ತಿದೆಯೇ ಹೊರತು ಇವರಿಂದ ಯಾವುದೇ ರೀತಿಯ ಲಾಭವಾಗುತ್ತಿಲ್ಲ. ಭಾರತದಲ್ಲಿ ಮೆಥೋಡಿಸ್ಟ್ ಸಭೆ ಸುಮಾರು 40 ಕೋಟಿ ನಷ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

    ಇಂತಹ ಸನ್ನಿವೇಶದಲ್ಲಿ ಬಿಆರ್ಸಿ (ಬೆಂಗಳೂರು ರಿಜನಲ್ ಕಾನ್ಫರೆನ್ಸ್) ವ್ಯಾಪ್ತಿಯ ಮುಖ್ಯಸ್ಥರಾಗಿ ಇದನ್ನು ಅಭಿವೃದ್ಧಿಪಡಿಸುವುದು ಬಿಟ್ಟು ಬದಲಿಗೆ ಇಲ್ಲಿನ ಆಸ್ತಿ ಪಾಸ್ತಿ ಮಾರಾಟದದಲ್ಲಿ ನಿರತರಾಗಿದ್ದು ಅಲ್ಲದೇ ಸಂಸ್ಥೆ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡುವುದು, ಆಸ್ತಿ ಒತ್ತೆ ಇಡುವುದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮುಜರಾಯಿ ಇಲಾಖೆಗೆ ನಿದರ್ೇಶನ ನೀಡಿ ಕ್ರಮಕ್ಕೆ ಮುಂದಾಗಿ ನಷ್ಟ ತಪ್ಪಿಸಬೇಕು, ತಕ್ಷಣ ಅಕ್ರಮ ತಡೆದು ಅನ್ಯಾಯ ಸರಿಪಡಿಸದಿದ್ದರೆ ಇನ್ನೂ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

    ವಿಜಯಕುಮಾರ ಬೆನಕನಳ್ಳಿ, ಉದಯಕುಮಾರ, ಇಮಾನುವೆಲ್ ಆರ್. ಬೆಳ್ಳಿ, ಸುಮಿತ್ರ ಬಳಿಚಕ್ರ, ಪಾಲರಾಜ್ ಯಡ್ಡಳ್ಳಿ, ಜಗದೀಶ ದಾಸನಕೇರಿ, ವಿಜಯಕುಮಾರ ಯಲ್ಹೇರಿ, ವಿಜಯಕುಮಾರ ಮಾಳಿಕೆರಿ, ರಾಜಪ್ಪ ದೊಡ್ಡಮನಿ, ಜಯಪ್ಪ ಮಾದ್ವಾರ, ಜಯಪ್ಪ ಕಿಲ್ಲನಕೇರಾ, ಜ್ಞಾನಮಿತ್ರ ಕಣೇಕಲ್, ನತಾನಿಯೆಲ್, ಸಾಮುವೆಲ್ ಕಣೇಕಲ್, ಶಾಂತರಾಜ್ ಚಿಂತನಳ್ಳಿ, ರಾಜು ಆಶನಾಳ, ಶರಣಪ್ಪ ಕೌಳೂರು, ಡ್ಯಾನಿಯೆಲ್ ಬೆನಕನಳ್ಳಿ, ಲಾಜರ್ ತೊಟ್ಲೂರು, ಯೇಸು ಕಿಲ್ಲನಕೇರಾ, ನಿರಂಜನ ಕೋಟಗೆರಿ, ಯೇಸು ಬೆಳಗುಂದಿ, ಅನಿಲ್ ಕುಮಾರ ಸೈದಾಪೂರ, ಸುಕುಮಾರ ಮೋಟ್ನಳ್ಳಿ, ಭಾಸ್ಕರ್ ಅಲ್ಲಿಪುರ, ಯೇಸಪ್ಪ ಠಾಣಗುಂದಿ, ಪ್ರವಿಣ ಹೊಸಳ್ಳಿ, ಜಾನವೆಸ್ಲಿ ಮುಂಡರಗಿ, ರಾಜು ಹೊಸಳ್ಳಿ, ಬೆಂಜಮಿನ ಹಿರೇನೂರ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts