More

    ಟ್ವಿಟರ್​ ಬಳಿಕ ಮೆಟಾದಲ್ಲೂ ಜಾಬ್​ಕಟ್​; 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆಯಲಿದ್ದಾರೆ ಮಾರ್ಕ್​ ಜುಕರ್​ಬರ್ಗ್​!

    ನವದೆಹಲಿ: ಎಲಾನ್​ ಮಸ್ಕ್​ ಟ್ವಿಟರ್​ಗೆ ಮುಖ್ಯಸ್ಥ ಆದ ಬಳಿಕ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದ ಹಾಕಿದ ಬೆನ್ನಿಗೆ ಸೋಷಿಯಲ್​ ಮೀಡಿಯಾದ ಮತ್ತೊಂದು ದಿಗ್ಗಜ ಫೇಸ್​ಬುಕ್​ನ ಮಾತೃಸಂಸ್ಥೆ ಮೆಟಾ ಕೂಡ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಯನ್ನು ತೆಗೆದು ಹಾಕಲಿದೆ.

    ಮೆಟಾ ಸಂಸ್ಥೆಯಿಂದ 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಲಾಗುವುದು ಎಂದು ಮೆಟಾ ಸಿಇಒ ಮಾರ್ಕ್​ ಜುಕರ್​ಬರ್ಗ್​ ಘೋಷಿಸಿದ್ದಾರೆ. ಈ ಮೂಲಕ ಸಂಸ್ಥೆಯ ಒಟ್ಟು ಉದ್ಯೋಗಿಗಳಲ್ಲಿ ಶೇ. 13 ಜನರನ್ನು ತೆಗೆದಂತಾಗುತ್ತದೆ ಎಂದೂ ಹೇಳಲಾಗಿದೆ. ಕಂಪನಿ ತನ್ನ ನಷ್ಟವನ್ನು ಸರಿದೂಗಿಸಿಕೊಳ್ಳಲು ಹಾಗೂ ವಹಿವಾಟಿನಲ್ಲಿ ಸುಧಾರಣೆ ತರಲು ಈ ಕ್ರಮಕೈಗೊಳ್ಳುತ್ತಿದೆ.

    ಇದನ್ನೂ ಓದಿ: ಟ್ವಿಟರ್ ಉದ್ಯೋಗಿಗಳ ವಜಾ ಪ್ರಕ್ರಿಯೆ ಶುರು: ಭಾರತದಲ್ಲೂ ಶೇ. 50 ನೌಕರರಿಗೆ ಗೇಟ್​ಪಾಸ್

    ನಾವು ಈ ನಿರ್ಣಯವನ್ನು ತೆಗೆದುಕೊಳ್ಳುತ್ತಿರುವುದಕ್ಕೆ ಮತ್ತು ಈ ಹಂತಕ್ಕೆ ತಲುಪಿರುವುದಕ್ಕೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತೇನೆ ಎಂದಿರುವ ಮಾರ್ಕ್​, ಇದು ಎಲ್ಲರಿಗೂ ಸಂಕಷ್ಟದ ಸಂಗತಿ ಎಂದು ನನಗೆ ಗೊತ್ತಿದೆ, ಅದರಲ್ಲೂ ಇದರ ಪರಿಣಾಮಕ್ಕೆ ಒಳಗಾಗುತ್ತಿರುವವರ ಕ್ಷಮೆ ಕೋರುತ್ತೇನೆ ಎಂದೂ ಹೇಳಿದ್ದಾರೆ.

    ಅಪಾರ್ಟ್​ಮೆಂಟ್ ಹತ್ತನೇ ಮಹಡಿಯಿಂದ ಹಾರಿದ ವಿದ್ಯಾರ್ಥಿ; ತಪ್ಪು ಮಾಡಿ ಸಿಕ್ಕಿಬಿದ್ದ ಮುಜುಗರ ಎದುರಿಸಲಾಗದೆ ಸಾವಿಗೆ ಶರಣು..

    ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts