More

    ಲಿಯೋನೆಲ್ ಮೆಸ್ಸಿ ಬಳಸಿದ್ದ ಟಿಶ್ಯು ಪೇಪರ್ 7.44 ಕೋಟಿ ರೂಪಾಯಿಗೆ ಸೇಲ್!

    ಬಾರ್ಸಿಲೋನಾ: ಇತ್ತೀಚೆಗೆ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್‌ಗೆ ಸೇರ್ಪಡೆಗೊಂಡಿರುವ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅದಕ್ಕೆ ಮುನ್ನ ಬಾರ್ಸಿಲೋನಾ ಜತೆಗಿನ 21 ವರ್ಷಗಳ ಸಂಬಂಧವನ್ನು ಕಡಿದುಕೊಳ್ಳುವ ವೇಳೆ ಕಣ್ಣೀರಿಟ್ಟಿದ್ದರು. ಸುದ್ದಿಗೋಷ್ಠಿಯಲ್ಲಿ ಅವರು ಕಣ್ಣೀರು ಒರೆಸಿಕೊಳ್ಳಲು ಬಳಸಿದ್ದ ಟಿಶ್ಯು ಪೇಪರ್‌ಅನ್ನು ಇದೀಗ ಬರೋಬ್ಬರಿ 7.44 ಕೋಟಿ ರೂಪಾಯಿಗೆ (1 ದಶಲಕ್ಷ ಡಾಲರ್) ಮಾರಾಟಕ್ಕಿಡಲಾಗಿದೆ!

    ಬಾರ್ಸಿಲೋನಾ ಕ್ಲಬ್‌ಗೆ ಭಾವನಾತ್ಮಕ ವಿದಾಯ ಹೇಳುವ ವೇಳೆ ಮೆಸ್ಸಿ ಅತ್ತಾಗ ಪಕ್ಕದಲ್ಲೇ ಇದ್ದ ಅವರ ಪತ್ನಿ ಆಂಟೋನೆಲಾ ರೊಕುಜೊ ಕಣ್ಣೀರು ಒರೆಸಿಕೊಳ್ಳಲು ಟಿಶ್ಯು ನೀಡಿದ್ದರು. 34 ವರ್ಷದ ಮೆಸ್ಸಿ ಬಳಿಕ ಆ ಟಿಶ್ಯು ಪೇಪರ್‌ಅನ್ನು ಅಲ್ಲೇ ಬಿಸಾಡಿದ್ದರು. ಸುದ್ದಿಗೋಷ್ಠಿಯಲ್ಲಿ ಮೊದಲ ಸಾಲಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಅದನ್ನು ಎತ್ತಿಕೊಂಡಿದ್ದರು. ಇದೀಗ ಆ ಅನಾಮಿಕ ವ್ಯಕ್ತಿ ಈ ಟಿಶ್ಯು ಅನ್ನು ಇ-ಕಾಮರ್ಸ್ ವೆಬ್‌ಸೈಟ್ ‘ಮೈಕೆಡ್ಯು’ ಮೂಲಕ ಹರಾಜಿಗೆ ಇಟ್ಟಿದ್ದು, 1 ಲಕ್ಷ ಡಾಲರ್ ಆರಂಭಿಕ ಬೆಲೆ ನಿಗದಿಪಡಿಸಿದ್ದಾರೆ.

    ಇದನ್ನೂ ಓದಿ: ಪಿಟಿ ಉಷಾ ಯಶಸ್ಸಿನ ರೂವಾರಿ ತರಬೇತುದಾರ ನಂಬಿಯಾರ್ ನಿಧನ

    ಈ ಟಿಶ್ಯು ಪೇಪರ್ ಮೆಸ್ಸಿ ಅವರ ಜೆನೆಟಿಕ್ ಡಿಎನ್‌ಎ ಹೊಂದಿದೆ. ಮೆಸ್ಸಿ ಅವರ ಕ್ಲೋನ್ ಸಿದ್ಧಪಡಿಸಲು ಇದು ಉಪಯೋಗಕ್ಕೆ ಬರಲಿದೆ ಎಂದು ಈ ಅನಾಮಿಕ ವ್ಯಕ್ತಿ ವಾದ ಮಂಡಿಸಿದ್ದಾನೆ. ಈ ಟಿಶ್ಯು ಪೇಪರ್‌ಅನ್ನು ಖರೀದಿಸಲು ಯಾರಾದರು ಮುಂದೆ ಬರುವರೇ ಎಂದು ಕಾದುನೋಡಬೇಕಾಗಿದೆ.

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts