More

    ಪಿಟಿ ಉಷಾ ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು..

    ಬೆಂಗಳೂರು: ಭಾರತದ ಟ್ರ್ಯಾಕ್ ಅಂಡ್ ಫೀಲ್ಡ್‌ನಲ್ಲಿ ರಾಣಿಯಂತೆ ಮೆರೆದ ಸ್ಟಾರ್ ಅಥ್ಲೀಟ್ ಪಿಟಿ ಉಷಾ ಅವರ 56ನೇ ಜನ್ಮಕ್ಕೆ ಕ್ರೀಡಾ ವಲಯದ ದಿಗ್ಗಜರು ಹಾಗೂ ಆಡಳಿತಗಾರರು ಶುಭಕೋರಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟ್ವಿಟರ್‌ನಲ್ಲಿ ಶುಭಕೋರಿದರು. ‘ಹುಟ್ಟುಹಬ್ಬದ ಶುಭಾಶಯಗಳು ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಕ್ವೀನ್. ನಮಗೆ ನೀವೆ ಸ್ಫೂರ್ತಿ ಎಂದು’ ಯುವರಾಜ್ ಟ್ವೀಟ್ ಮಾಡಿದ್ದರೆ, ಭಾರತದ ನಿಜವಾದ ಗೋಲ್ಡನ್ ಗರ್ಲ್, ಯುವ ಅಥ್ಲೀಟ್‌ಗಳಿಗೆ ನೀವೆ ಮಾದರಿ ಎಂದು ಚಿತ್ರದೊಂದಿಗೆ ರಿಜಿಜು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ:ಜೀ಼ ಕನ್ನಡದಲ್ಲಿ ‘ದಿಯಾ’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

    ಭಾರತದ ಸರ್ವ ಶ್ರೇಷ್ಠ ಅಥ್ಲೀಟ್ ಎನಿಸಿರುವ ಪಿಟಿ ಉಷಾ, ಏಷ್ಯನ್ ಗೇಮ್ಸ್‌ನಲ್ಲಿ 11 ಪದಕ ಗೆದ್ದಿದ್ದರು. 2000ದಲ್ಲಿ ವೃತ್ತಿ ಘೋಷಿಸಿ, 2002ರಲ್ಲಿ ಪಿಟಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಸ್ಥಾಪಿಸಿದರು. 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಜಯಿಸಿದ್ದ 5 ಸ್ವರ್ಣಗಳ ಪೈಕಿ ಉಷಾ ಅವರೇ 4 ಸ್ವರ್ಣ ಗೆದ್ದಿದ್ದರು. 200ಮೀ, 400ಮೀ, 400ಮೀ ಹರ್ಡಲ್ಸ್ ಹಾಗೂ 4/400 ಮೀಟರ್ ರಿಲೇ ವಿಭಾಗದಲ್ಲಿ ಸ್ವರ್ಣ ಹಾಗೂ 100ಮೀಟರ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 1985ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 5 ಚಿನ್ನದ ಪದಕ ಜಯಿಸಿದ್ದರು. ಪಯೋಲಿ ಎಕ್ಸ್‌ಪ್ರೆಸ್ ಖ್ಯಾತಿಯ ಪಿಟಿ ಉಷಾ, 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ 400ಮೀಟರ್ ಹರ್ಡಲ್ಸ್‌ನಲ್ಲಿ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts