More

    ಪರ‌್ಯಾಯ ನಿರೀಕ್ಷೆಯಲ್ಲಿ ವ್ಯಾಪಾರಿಗಳು; ಕನಸವಾಡಿ ಶನಿಮಹಾತ್ಮ ದೇಗುಲದ ಬಳಿಯ ವ್ಯಾಪಾರಿಗಳಿಗೆ ಆತಂಕ

    ಪ್ರದೀಪ್‌ಕುಮಾರ್ ಆರ್. ದೊಡ್ಡಬಳ್ಳಾಪುರ: ಮಧುರೆ ಹೋಬಳಿ ಕನಸವಾಡಿ ಮುಖ್ಯರಸ್ತೆ ವಿಸ್ತರಣೆಯಿಂದ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ದೇಗುಲದ ಬಳಿ ನೂರಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿಗೆ ಆತಂಕ ಎದುರಾಗಿದೆ.

    ನೆಲಮಂಗಲ-ಮಧುರೆ-ರಾಜಾನುಕುಂಟೆ-ಬೆಟ್ಟಹಲಸೂರು-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ ವಿಸ್ತರಣೆ ಆರಂಭವಾಗಿದ್ದು, ಪರ‌್ಯಾಯ ವ್ಯವಸ್ಥೆ ಕಲ್ಪಿಸುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

    20 ವರ್ಷಗಳಿಂದ ಹಣ್ಣು, ಹೂವು, ಕಾಯಿ ಮಾರಾಟ ಮಾಡುತ್ತಿದ್ದವರಿಗೆ ದಿಕ್ಕು ತೋಚದಂತಾಗಿದೆ.
    ದೇವಾಲಯಕ್ಕೆ ಪ್ರತಿ ಶನಿವಾರ ಹಾಗೂ ರಜಾ ದಿನಗಳು, ಶ್ರಾವಣ ಮಾಸ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರೂ ಬರುತ್ತಾರೆ. ದೇವಾಲಯ ರಸ್ತೆ ಬದಿಯಲ್ಲಿರುವ ಕಾರಣ ವಿಸ್ತರಣೆ ಮಾಡಿದರೆ ಭವಿಷ್ಯದಲ್ಲಿ ದೇವಾಲಯದ ಅಭಿವೃದ್ಧಿಗೂ ತೊಡಕಾಗಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

    ಗ್ರಾಮದ ಮಧ್ಯೆ ರಸ್ತೆ ವಿಸ್ತರಣೆ ಕೈಬಿಟ್ಟು ಹೊರವಲಯದಲ್ಲಿ ರಸ್ತೆ ನಿರ್ಮಿಸಬಹುದು. ಆದರೆ ರಾಜಕೀಯ ಹಿತಾಸಕ್ತಿಯಂದಾಗಿ ಸ್ಥಳೀಯ ಜನಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

    ರಸ್ತೆ ವಿಸ್ತರಣೆಯಿಂದ ವಾಹನ ಸಂಚಾರ ಹೆಚ್ಚಾಗಿ ಅಪಘಾತಗಳು ಸಂಭವಿಸಬಹುದು. ಭವಿಷ್ಯದಲ್ಲಿ ದೇವಾಲಯದ ಅಭಿವೃದ್ಧಿಗೆ ತೊಂದರೆಯಾಗಲಿದ್ದು, ಹೊರವಲಯದಲ್ಲಿ ರಸ್ತೆ ನಿರ್ಮಿಸಬೇಕು.
    ಕೆ.ವಿ.ಪ್ರಕಾಶ್, ಅಧ್ಯಕ್ಷರು, ದೇವಾಲಯ ಕಾರ್ಯಕಾರಿ ಸಮಿತಿ

    ದೇವಾಲಯದ ಬಳಿ ಸರ್ವೀಸ್ ರಸ್ತೆ ನಿರ್ಮಿಸುವುದರಿಂದ ವಾಹನಗಳು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತವೆ. ಇಲ್ಲಿನ ಬೀದಿ ವ್ಯಾಪಾರಿಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು.
    ಕೆ.ಸಿ.ಅಶ್ವಥ್‌ರೆಡ್ಡಿ, ಎಇಇ ಕೆಆರ್‌ಡಿಸಿಎಲ್

    20 ವರ್ಷಗಳಿಂದ ಹಣ್ಣು ಕಾಯಿ ಅಂಗಡಿಯಿಂದ ಜೀವನ ನಡೆಯುತ್ತಿದ್ದು, ರಸ್ತೆ ವಿಸ್ತರಣೆಯಿಂದ ಅಂಗಡಿ ತೆರವು ಮಾಡಬೇಕಿದ್ದು, ದಿಕ್ಕೆ ತೋಚದಂತಾಗಿದೆ.
    ಮಂಜುನಾಥ್, ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts