More

    ಭಗವಂತನ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಸಾಧ್ಯ

    ಹಿರೇಕೆರೂರ: ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ವಿವಿಧ ಶಾಲಾ- ಕಾಲೇಜುಗಳಿಂದ ಆವರಣದಲ್ಲಿ 73ನೇ ವರ್ಷದ ನಿಮಿತ್ತ ಪ್ರತಿಷ್ಠಾಪಿಸಿದ್ದ ಮಹಾಗಣಪತಿಗೆ ಶುಕ್ರವಾರ ವಿಶೇಷ ಪೂಜೆ ನೆರವೇರಿತು.

    ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ಸಹಸ್ರಾರು ಮಕ್ಕಳು ಸಂಸ್ಥೆಯಲ್ಲಿ ಜ್ಞಾನಾರ್ಜನೆಗಾಗಿ ಬಂದ ವಿದ್ಯಾರ್ಥಿಗಳಲ್ಲಿ ದೇವರ ಕುರಿತು ಭಕ್ತಿ ಕಡಿಮೆಯಾಗುತ್ತಿರುವುದನ್ನು ಮನಗಂಡು ಅವರಲ್ಲಿ ಆಧ್ಯಾತ್ಮಿಕ ವಿಚಾರ ಬೆಳೆಸಲು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.
    ದೇವರ ಸ್ತುತಿ, ಪೂಜೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಬೆಳೆಯಬೇಕು. ಮಾನಸಿಕ ನೆಮ್ಮದಿಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಯಶಸ್ಸಿಗಾಗಿ ಮನಸ್ಸನ್ನು ಕೇಂದ್ರಿಕರಿಸುವುದು ಅತೀ ಅಗತ್ಯವಾಗಿದೆ. ಭಗವಂತನ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದರು.

    ಈ ವರ್ಷ ವಿಶೇಷವಾಗಿ ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಣಪತಿ ದರ್ಶನಕ್ಕೆ ಅವಕಾಶ ನೀಡುವುದರೊಂದಿಗೆ 3 ದಿನಗಳ ಕಾಲ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮ ಏರ್ಪಡಿಸಿ ಮನರಂಜನೆ ರಸದೌತಣ ಉಣಬಡಿಸಲಾಗಿದೆ. ಅತ್ಯುತ್ತಮವಾಗಿ ಕಾರ್ಯಕ್ರಮ ನಿರ್ವಹಿಸಿದ ವಿದ್ಯಾರ್ಥಿಗಳಿಗೆ ಕೊನೆಯ ದಿನ ವಿಶೇಷ ಸನ್ಮಾನ ಮಾಡಿ ಪ್ರೇರೇಪಿಸಲಾಗುತ್ತಿದೆ ಎಂದರು.

    ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಎಷ್ಟೇ ಒತ್ತಡವಿದ್ದರೂ, ಪ್ರತಿ ದಿನ ಕ್ಷಣಹೊತ್ತು ಪ್ರಸನ್ನಚಿತ್ತರಾಗಿ ದೇವರ ಸ್ಮರಣೆ ಮಾಡುವುದರಿಂದ ಮಾನಸಿಕ ಪ್ರಸನ್ನತೆ ಪಡೆದುಕೊಳ್ಳಬೇಕು ಎಂದರು.

    ಪ್ರಾಚಾರ್ಯರಾದ ಬಿ.ಪಿ. ಹಳ್ಳೇರ, ಡಾ.ಎಸ್.ಬಿ. ಚನ್ನಗೌಡ್ರ, ಮುಖ್ಯಶಿಕ್ಷಕರಾದ ಕೆ.ಎಂ. ಸುಕುಕುಮಾರ, ಆರ್.ಎಚ್. ಪೂಜಾರ, ಬಿ.ವಿ. ಸನ್ನೇರ, ಸತೀಶ ಬಣಕಾರ, ರವಿ ಬಡಳ್ಳೇರ ಹಾಗೂ ಸಂಸ್ಥೆಯ ಅಧೀನ ಶಾಲಾ- ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಉಪಪ್ರಾಚಾರ್ಯೆ ಕುಸುಮಾ ಮಾವೀನತೋಪ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts