More

    ಇದು ಮುಟ್ಟಿನ ವಿಷಯ; ಬಾಲಕರಲ್ಲೂ ಅರಿವು ಮೂಡಲಿ ಎಂದ ಸಚಿವೆ ಸ್ಮೃತಿ ಇರಾನಿ

    ನವದೆಹಲಿ: ಮುಟ್ಟು ಅವಮಾನದ ವಿಷಯವಲ್ಲ ಎಂಬುದರ ಕುರಿತು ಬಾಲಕಿಯರಿಗೆ ಮಾತ್ರವಲ್ಲದೆ ಬಾಲಕರಲ್ಲಿಯೂ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕರೆ ನೀಡಿದರು.
    ಗುರುವಾರ ಮುಟ್ಟು ನೈರ್ಮಲ್ಯ ದಿನದ ಅಂಗವಾಗಿ ಈ ಕುರಿತು ಮಾತನಾಡಿದ ಅವರು ಇದು ನಾಚಿಕೆಪಟ್ಟುಕೊಳ್ಳುವ ಸಂಗತಿಯಲ್ಲ, ಅತ್ಯಂತ ಮೂಲಭೂತವಾದ ಸಂಗತಿ. ಇದನ್ನು ಇನ್ನೂ ಅವಮಾನ ಎಂದು ಮುಚ್ಚಿಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದಾಗಿ ಅಂದಾಜು ಶೇ. 23 ಬಾಲಕಿಯರು ಪ್ರೌಢಾವಸ್ಥೆಗೆ ಕಾಲಿಡುತ್ತಲೇ ಶಾಲೆಯಿಂದ ಹೊರಗುಳಿಯುವಂತಾಗಿದೆ ಎಂದರು.

    ಇದನ್ನೂ ಓದಿ: ಇಂದು ಮುಟ್ಟಿನ ನೈರ್ಮಲ್ಯ ದಿನ: ಮುಟ್ಟಿನ ಅವಧಿಯ ಶುಚಿತ್ವ

    ಮುಟ್ಟಿನ ನೈರ್ಮಲ್ಯದ ಬಗ್ಗೆ ಬಾಲಕಿಯರೊಂದಿಗೆ ಮಾತ್ರವಲ್ಲ, ಬಾಲಕರೊಂದಿಗೂ ಮಾತನಾಡಬೇಕು. ಭೂಮಿಯ ಅರ್ಧದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಈ ಸಂಗತಿಯನ್ನು ಮುಚ್ಚಿಡದೆ ಸಾಮಾನ್ಯೀಕರಿಸುವ ಸಮಯ ಇದು ಎಂದು ಅಭಿಪ್ರಾಯಪಟ್ಟರು.
    ಮುಟ್ಟಿನ ನೈರ್ಮಲ್ಯ ದಿನವನ್ನು ಮೊದಲ ಬಾರಿಗೆ 2014 ರ ಮೇ 28 ರಂದು ಆಚರಿಸಲಾಯಿತು.
    ಈ ದಿನದ ಆಚರಣೆಯು ಹೆಣ್ಣುಮಕ್ಕಳಲ್ಲಿ ‘ಆ ದಿನಗಳ’ಲ್ಲಿ ನೈರ್ಮಲ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದರ ಮಹತ್ವದ ಬಗ್ಗೆ ಅರಿವು ಮೂಡಿಸುಸುತ್ತದೆ. ಇದು ಋತುಸ್ರಾವದ ದಿನಗಳಲ್ಲಿ ಬಾಲಕಿಯರಿಗೆ ನಿಷೇಧ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಋಣಾತ್ಮಕ ಪರಿಪಾಠಗಳು ನಡೆಯುವುದನ್ನು ತಡೆಗಟ್ಟಲು ಒತ್ತಾಯಿಸುತ್ತದೆ.

    ಇದನ್ನೂ ಓದಿ: ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಐ ಆಧಾರಿತ ಎಲ್ಎಸ್​​ಎಟಿ ಆನ್​​​ಲೈನ್ ಪರೀಕ್ಷೆ

    ಮಹಿಳೆಯರಿಗೆ ಋತುಸ್ರಾವದ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಎಲ್ಲ ಜನೌಷಧಿ ಕೇಂದ್ರಗಳಲ್ಲಿ ಕೈಗೆಟುಕುವ ದರಗಳಲ್ಲಿ ನ್ಯಾಪ್​​ಕಿನ್​​ಗಳು ಲಭ್ಯ ಇವೆ.
    ಮುಟ್ಟಿನ ನೈರ್ಮಲ್ಯ ದಿನ (2020) ದಂದು ಮುಟ್ಟು ಎಂಬುದು ಅವಮಾನದ ಸಂಗತಿಯಲ್ಲ ಎಂಬುದರ ಕುರಿತು ನಾವೆಲ್ಲ ಕೇವಲ ಬಾಲಕಿಯರಲ್ಲಷ್ಟೇ ಅಲ್ಲದೆ ಬಾಲಕರಲ್ಲೂ ಅರಿವು ಮೂಡಿಸಲು ಬದ್ಧರಾಗೋಣ ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.
    ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾತನಾಡಿ, ಮಹಿಳೆಯ ಜೈವಿಕ ಚಕ್ರವು ಸಾಧನೆಯ ಹಾದಿಯಲ್ಲಿ ಎಂದಿಗೂ ತಡೆಗೋಡೆಯಾಗಬಾರದು. ತನ್ನ ನೈರ್ಮಲ್ಯ ಕಾಪಾಡಿಕೊಳ್ಳುವುದು ಆಕೆಯ ಹಕ್ಕು” ಎಂದು ಹೇಳಿದರು.

    ಪಟ್ಟಣಕ್ಕೆ ಬಂದ ಕರಡಿಯನ್ನು ಸೆರೆ ಹಿಡಿಯಲು ಬಳಸಿದ ವಸ್ತು ಯಾವುದು ಗೊತ್ತಾ? ಕೇಳಿದ್ರೆ ನಗ್ತೀರಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts