More

    ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಐ ಆಧಾರಿತ ಎಲ್ಎಸ್​​ಎಟಿ ಆನ್​​​ಲೈನ್ ಪರೀಕ್ಷೆ

    ನವದೆಹಲಿ: ಲಾ ಸ್ಕೂಲ್ ಅಡ್ಮಿಷನ್ ಟೆಸ್ಟ್​ (ಎಲ್​ಎಸ್​ಎಟಿ-ಇಂಡಿಯಾ) ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಜುಲೈ 19 ರಿಂದ ಪರೀಕ್ಷೆ ನಡೆಯಲಿದೆ ಎಂದು ಲಾ ಸ್ಕೂಲ್ ಅಡ್ಮಿಷನ್ ಕೌನ್ಸಿಲ್ (ಎಲ್​ಎಸ್​​ಎಸಿ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
    ಸಿಬಿಎಸ್​ಇಯ ಉಳಿದ ಪರೀಕ್ಷೆ ಜುಲೈ 1 ರಿಂದ 15 ರ ವರೆಗೆ ನಡೆಯಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.

    ಇದನ್ನೂ ಓದಿ: ಕರೊನಾ ನಿಗ್ರಹಕ್ಕೆ ‘ಮಾನವ’ ಬಲಿ; ದೇವಿಯ ಇಷ್ಟಾರ್ಥ ಪೂರೈಸಿದೆ ಎಂದ ಅರ್ಚಕ

    ಸದ್ಯ ಎಲ್​​ಎಸ್​ಎಟಿ -ಇಂಡಿಯಾ ಪರೀಕ್ಷೆಯನ್ನು ಜುಲೈ 19 ರಿಂದ ನಡೆಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬುದ್ಧಿಮತ್ತೆ ಆಧಾರಿತ ಆನ್​ಲೈನ್ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ.
    ಈ ಪರೀಕ್ಷೆ ಮೂರು ಅವಧಿಗಳಲ್ಲಿ ನಾಲ್ಕು ದಿನಗಳವರೆಗೆ ನಡೆಯಲಿದ್ದು, ಜುಲೈ 19 ರಿಂದ ಆರಂಭಗೊಳ್ಳಲಿದೆ. ಅಭ್ಯರ್ಥಿಗಳಿಗೆ ಒಂದು ಅವಧಿಯನ್ನು ನೀಡಲಾಗುತ್ತದೆ. ಪರೀಕ್ಷೆ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಮುಖ್ಯ ಪರೀಕ್ಷೆಯ ಅವಧಿ ಮುಗಿದ 2-3 ದಿನಗಳ ನಂತರ ಮರು ಪರೀಕ್ಷೆಗೆ ಅವಕಾಶವಿರುತ್ತದೆ ಎಂದು ಮಂಡಳಿ ತಿಳಿಸಿದೆ. ಪರೀಕ್ಷೆಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಜುಲೈ 5 ರೊಳಗಾಗಿ www.discoverlaw.in ನಲ್ಲಿ ಅರ್ಜಿ ಸಲ್ಲಿಸಬಹುದು.

    ಮಿಡತೆ ದಾಳಿ ತಡೆಗೆ ಡ್ರೋನ್ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts