More

    ಯುವತಿಯರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಿ

    ಹೊಳೆನರಸೀಪುರ: ಯುವತಿಯರು ತಮ್ಮ ಋತುಚಕ್ರದ ಸಮಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉದಾಸೀನ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆ ಕಾಡಲಿವೆ ಎಂದು ಡಾ.ನಿಷ್ಕಲಾ ಎಚ್ಚರಿಸಿದರು.

    ಪಟ್ಟಣದ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ವಾಸವಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಋತುಚಕ್ರದ ಸ್ವಚ್ಛತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಯುವತಿಯರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಋತುಚಕ್ರದ ವಿವಿಧ ಹಂತಗಳ ಬಗ್ಗೆ ಜಾಗೃತಿ ಮೂಡಿಸಿದರು.

    ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಮಾತನಾಡಿ, ವಾಸವಿ ಕ್ಲಬ್ ಆರ್ಯವೈಶ್ಯ ಜನಾಂಗದವರಿಂದ ಪ್ರಾರಂಭವಾಗಿದ್ದರೂ, ಸಮಾಜದ ಎಲ್ಲ ವರ್ಗದ ಜನರಿಗೆ ಸೇವಾಕಾರ್ಯಗಳನ್ನು ಮಾಡುತ್ತಿದೆ. ಆರೋಗ್ಯ ಸೇವೆ, ಶಿಕ್ಷಣ ಸೇವೆ, ಆಹಾರ ಸೇವೆ ಎಲ್ಲ ಬಗೆಯ ಸೇವೆಯನ್ನು ನೀಡಿದ್ದೇವೆ ಎಂದರು.

    ಜೇಸಿ ಸಂಸ್ಥೆಯ ತರಬೇತುದಾರ ಎಚ್.ವಿ. ಸುರೇಶ್‌ಕುಮಾರ್ ಮಾತನಾಡಿ, ದೈಹಿಕ ಆರೋಗ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಮಾನಸಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ನೀವು ಸದಾಕಾಲ ಆತ್ಮವಿಶ್ವಾಸದಿಂದ ಇರುವುದರ ಜತೆಗೆ ಸಕಾರಾತ್ಮಕವಾಗಿ ಯೋಚಿಸಬೇಕು ಎಂದರು.

    ಪ್ರಾಂಶುಪಾಲ ಜಯರಾಮ್ ಮಾತನಾಡಿ, ನಾವು ನಮ್ಮ ಕಾಲೇಜಿನ ಶೌಚಗೃಹಗಳನ್ನು ಅತ್ಯಂತ ಸ್ವಚ್ಛವಾಗಿ ಇಟ್ಟಿದ್ದೇವೆ. ಪ್ರತಿ ದಿನ ಮೂರು ಬಾರಿ ಸ್ವಚ್ಛಗೊಳಿಸಲಾಗುವುದು. ವಾಸವಿ ಕ್ಲಬ್ ಸದಸ್ಯರು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದರು.
    ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಎಸ್. ಗೋಕುಲ್, ಹೇಮಾ ನಾಗೇಂದ್ರ, ಮಂಜುನಾಥ್, ಗುಪ್ತಾ, ವಾಸವಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts