More

    ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

    ಹೊಳೆನರಸೀಪುರ: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ನೆನಪಿಗಾಗಿ ಬುಧವಾರ ಇಲ್ಲಿನ ಟಿ.ಮಲ್ಲೇಶ್ ಅವರ ಪೆಟ್ರೋಲ್ ಬಂಕ್ ಆವರಣದಲ್ಲಿ ಬುಧವಾರ ಉಚಿತ ರಕ್ತದಾನ, ಹೃದ್ರೋಗ ತಪಾಸಣೆ, ಕಣ್ಣಿನ ದೃಷ್ಟಿದೋಷ, ರಕ್ತದೊತ್ತಡ ಹಾಗೂ ಮಧುಮೇಹ ರೋಗಗಳ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

    ಶಿಬಿರವನ್ನು ಪೆಟ್ರೋಲ್ ಬಂಕ್ ಮಾಲೀಕ ಟಿ.ಎಂ.ಗಿರೀಶ್ ಉದ್ಘಾಟಿಸಿದರು. ಚನ್ನರಾಯಪಟ್ಟಣದ ಸ್ವಯಂ ಪ್ರೇರಿತ ರಕ್ತ ನಿಧಿ ಕೇಂದ್ರವು ರಕ್ತದಾನ ಶಿಬಿರ, ಪುಣ್ಯಕಣ್ಣಿನ ಆಸ್ಪತ್ರೆ ಅವರು ದೃಷ್ಟಿದೋಷ ತಪಾಸಣಾ ಶಿಬಿರ, ಹೃದಯರೋಗ ತಜ್ಞ ಡಾ. ಸ್ವರೂಪ್ ಅವರ ಹಾಸನದ ಇಂಡಿಯಾ ಆಸ್ಪತ್ರೆಯ ತಂಡದವರು ಹೃದಯ ರೋಗ ತಪಾಸಣಾ ಶಿಬಿರ ನಡೆಸಿಕೊಟ್ಟರು.

    ಶಿಬಿರದಲ್ಲಿ 30 ಯೂನಿಟ್ ರಕ್ತ ಸಂಗ್ರಹವಾಯಿತು. 136 ಜನರು ಇಸಿಜಿ, 131 ಜನರು ದೃಷ್ಟಿದೋಷ, 158 ಜನರು ರಕ್ತದೊತ್ತಡ ಮತ್ತು ಮಧುಮೇಹ ರೋಗ ತಪಾಸಣೆ ಮಾಡಿಸಿಕೊಂಡರು. ಎಚ್.ವಿ.ರವಿಕುಮಾರ್, ಪೆಟ್ರೋಲ್ ಬಂಕ್ ವ್ಯವಸ್ಥಾಪಕ ಚರಣ್, ಕಾಂತರಾಜು, ದೊಡ್ಡಮಲ್ಲೇಗೌಡ, ಸ್ಮಿತಾ ಗಿರೀಶ್, ಪುರಸಭಾ ಸದಸ್ಯ ಎ.ಜಗನ್ನಾಥ್, ಎ.ಆರ್.ರವಿಕುಮಾರ್, ಎಚ್.ಎನ್. ಜಗದೀಶ್, ಈಶ್ವರಿ ಶಿಬಿರದ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts