More

    ಇನ್ನು ಕ್ರಿಕೆಟಿಗರೂ ಒಲಿಂಪಿಕ್ಸ್​​ ಪದಕದ ಕನಸು ಕಾಣಬಹುದು!

    ಮುಂಬೈ: ಇತರ ಕ್ರೀಡಾಪಟುಗಳಂತೆ ಇನ್ನು ಕ್ರಿಕೆಟಿಗರೂ ಒಲಿಂಪಿಕ್ಸ್​ ಪದಕದ ಕನಸು ಕಾಣಬಹುದಾಗಿದೆ. 2028ರಲ್ಲಿ ಕ್ರಿಕೆಟ್​ ಕೂಡ ಜಾಗತಿಕ ಕ್ರೀಡಾಹಬ್ಬದ ಭಾಗವಾಗುವುದು ಬಹುತೇಕ ಖಚಿತಗೊಂಡಿದೆ. ಪುರುಷರ ಮತ್ತು ಮಹಿಳಾ ವಿಭಾಗದ ಟಿ20 ಕ್ರಿಕೆಟ್​ ಸ್ಪರ್ಧೆಯನ್ನು 2028ರ ಒಲಿಂಪಿಕ್ಸ್​ಗೆ ಸೇರ್ಪಡೆಗೊಳಿಸುವ ಆತಿಥೇಯ ಲಾಸ್​ ಏಂಜಲಿಸ್​ ಗೇಮ್ಸ್​ ಸಂಟನಾ ಸಮಿತಿಯ ಪ್ರಸ್ತಾಪವನ್ನು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿ ಶುಕ್ರವಾರ ಅಧಿಕೃತವಾಗಿ ಅಂಗೀಕರಿಸಿದೆ.

    ಇನ್ನು ಭಾನುವಾರದಿಂದ 3 ದಿನಗಳ ಕಾಲ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನದಲ್ಲಿ ಈ ಪ್ರಸ್ತಾಪವನ್ನು ಮತದಾನಕ್ಕೆ ಇಡಲಾಗುವುದು. ಅಲ್ಲಿ ಬಹುಮತ ಸಿಕ್ಕರೆ, ಬರೋಬ್ಬರಿ 128 ವರ್ಷಗಳ ಬಳಿಕ ಕ್ರಿಕೆಟ್​ ಆಟ, ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್​ಗೆ ಮರಳುವುದು ಅಧಿಕೃತವೆನಿಸಲಿದೆ. ಕ್ರಿಕೆಟ್​ ಆಟದಲ್ಲಿ ಬಲಿಷ್ಠವಾಗಿ ಬೆಳೆದಿರುವ ಭಾರತದ ಪಾಲಿಗೆ ಇದು ಶುಭ ಸುದ್ದಿಯಾಗಿದ್ದು, 2028ರಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯೂ ಹುಟ್ಟಿಕೊಂಡಿದೆ.

    ಕ್ರಿಕೆಟ್​ ಜತೆಗೆ ಬೇಸ್​ಬಾಲ್​/ಸಾಫ್ಟ್​ಬಾಲ್​, ಫ್ಲ್ಯಾಗ್ ಫುಟ್​ಬಾಲ್​, ಲಾಕ್ರೋಸ್​ (ಸಿಕ್ಸಸ್​) ಮತ್ತು ಸ್ಕ್ವಾಷ್​ ಸಹಿತ ಒಟ್ಟು 5 ಕ್ರೀಡೆಗಳನ್ನು 2028ರ ಒಲಿಂಪಿಕ್ಸ್​ಗೆ ಹೊಸದಾಗಿ ಸೇರಿಸಲು ಅಧ್ಯಕ್ಷ ಥಾಮಸ್​ ಬಾಚ್​ ನೇತೃತ್ವದ ಐಒಸಿ ಸಮಿತಿ ಸಮ್ಮತಿಸಿದೆ. ಟಿ20 ಕ್ರಿಕೆಟ್​ ಜನಪ್ರಿಯತೆಯನ್ನು ಪರಿಗಣಿಸಿ ಒಲಿಂಪಿಕ್ಸ್​ ಪ್ರವೇಶ ನೀಡಲಾಗುತ್ತಿದೆ ಎಂದು ಥಾಮಸ್​ ಬಾಚ್​ ತಿಳಿಸಿದ್ದಾರೆ. ಕ್ರಿಕೆಟ್​ ಈ ಹಿಂದೆ ಪ್ಯಾರಿಸ್​ 1990ರ ಒಲಿಂಪಿಕ್ಸ್​ನಲ್ಲಿ ಏಕೈಕ ಬಾರಿ ಪದಕ ಸ್ಪರ್ಧೆಯಾಗಿತ್ತು. ಆದರೆ ಆಗ ಎರಡೇ (ಬ್ರಿಟನ್-ಫ್ರಾನ್ಸ್​​​) ತಂಡಗಳು ಆಡಿದ್ದವು.

    ಆರೇ ತಂಡಗಳಿಗೆ ಅವಕಾಶ?
    ಆತಿಥೇಯ ಲಾಸ್​ ಏಂಜಲಿಸ್​ ಸಂಟನಾ ಸಮಿತಿಯ ಪ್ರಸ್ತಾಪದ ಪ್ರಕಾರ, ಕ್ರಿಕೆಟ್​ ಸಹಿತ ಹೊಸದಾಗಿ ಸೇರ್ಪಡೆಗೊಂಡಿರುವ ಟೀಮ್​ ಗೇಮ್​ಗಳ ಪೈಕಿ ಒಂದು ವಿಭಾಗದಲ್ಲಿ ಗರಿಷ್ಠ 6 ತಂಡಗಳಷ್ಟೇ ಭಾಗವಹಿಸಬಹುದು. ಇನ್ನು ನಿಯಮ ಪ್ರಕಾರ, ಆತಿಥೇಯ ಅಂದರೆ ಅಮೆರಿಕದ ಕ್ರಿಕೆಟ್​ ತಂಡಕ್ಕೆ ನೇರಪ್ರವೇಶ ಸಿಗಲಿದೆ. ಆದರೆ ಒಟ್ಟಾರೆ ಅರ್ಹತಾ ಪ್ರಕ್ರಿಯೆ 2025ರ ವೇಳೆಯಲ್ಲಷ್ಟೇ ಅಂತಿಮಗೊಳ್ಳಬಹುದು ಎಂದು ಐಒಸಿಯ ಕ್ರೀಡಾ ನಿರ್ದೇಶಕ ಕಿಟ್​ ಮೆಕ್​ಕಾನೆಲ್​ ತಿಳಿಸಿದ್ದಾರೆ. ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಒಟ್ಟು ಕ್ರೀಡಾಪಟುಗಳಿಗೆ 10,500ರ ಮಿತಿ ಇರುವುದರಿಂದ ತಂಡ ಕ್ರೀಡೆಗಳಲ್ಲಿ ತಂಡಗಳ ಸಂಖ್ಯೆಗೆ ಕಡಿವಾಣ ಹಾಕಲಾಗುತ್ತಿದೆ.

    ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts