More

    ‘ಥಗ್ಸ್​​ ಆಫ್​ ರಾಮಘಡ’ ಚಿತ್ರಕ್ಕೆ ಉತ್ತರ ಕರ್ನಾಟಕದ ಆ ಘಟನೆಯೇ ಸ್ಫೂರ್ತಿ …

    ಬೆಂಗಳೂರು: ‘ಥಗ್ಸ್ ಆಫ್ ಮಾಲ್ಗುಡಿ’ ಎಂಬ ಚಿತ್ರ ಮಾಡುವುದಾಗಿ ರಕ್ಷಿತ್​ ಹಿಂದೊಮ್ಮೆ ಹೇಳಿಕೊಂಡಿದ್ದರು. ಅವರ ಅಭಿಮಾನಿಗಳು ಸಹ ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆ ಇಟ್ಟಿದ್ದೇ ಬಂತು, ಚಿತ್ರ ಮಾತ್ರ ಇದುವರೆಗೂ ಬಂದಿಲ್ಲ. ಮುಂದೆ ಬರುತ್ತದೋ ಇಲ್ಲವೋ ಎಂಬುದು ಸಹ ಗೊತ್ತಿಲ್ಲ. ಹೀಗಿರುವಾಗಲೇ, ಕನ್ನಡದಲ್ಲಿ ‘ಥಗ್ಸ್​ ಆಫ್​ ರಾಮಘಡ’ ಎಂಬ ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ನಾಗಶೇಖರ್​ ಈಗ ‘ಪಾದರಾಯ; ‘ವಿಕ್ರಾಂತ್​ ರೋಣ’ ನಿರ್ಮಾಪಕರ ಹೊಸ ಚಿತ್ರ

    ‘ಥಗ್ಸ್​ ಆಫ್​ ರಾಮಘಡ’ ಚಿತ್ರವನ್ನು ಒಂದಿಷ್ಟು ಹೊಸಬರು ಸೇರಿ ಮಾಡಿದ್ದಾರೆ. ಈ ಚಿತ್ರವನ್ನು ಕಾರ್ತಿಕ್​ ನಿರ್ದೇಶನ ಮಾಡಿದ್ದಾರೆ. ಚಂದನ್ ರಾಜ್, ಅಶ್ವಿನ್ ಹಾಸನ್ ಮತ್ತು ಮಹಾಲಕ್ಷ್ಮೀ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಪೋಸ್ಟರ್​ನ್ನು ಕಳೆದ ವಾರ ಯೋಗರಾಜ್​ ಭಟ್​ ಬಿಡುಗಡೆ ಮಾಡಿದ್ದರು. ಈಗ ರಾಜೇಶ್​ ಕೃಷ್ಣನ್​ ಮತ್ತು ಅನುರಾಧಾ ಭಟ್​ ಹಾಡಿರುವ ‘ನಗು ನಗುತ ಆವರಿಸೋ ಈ ಹುಡುಗಿ …’ ಎಂಬ ಮೆಲೋಡಿ ಹಾಡನ್ನು ಬಿಡುಗಡೆ ಮಾಡಲಾಗಿದೆ.

    ಐಟಿ ಕ್ಷೇತ್ರದಲ್ಲಿ ಮತ್ತು ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಅನುಭವವಿರುವ ಕಾರ್ತಿಕ್​ಗೆ ಇದು ನಿರ್ದೇಶಕರಾಗಿ ಮೊದಲ ಸಿನಿಮಾ. ‘ಮೂಲತಃ ನಾನು ಯಾದಗಿರಿಯವನು. ಈ ಚಿತ್ರದ ಕಥೆ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದ್ದು ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಥಾಹಂದರದ ಸಿನಿಮಾ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಒಂದು ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದು. ಅದಕ್ಕೆಂದೇ ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ರಿಯಲಿಸ್ಟಿಕ್ ಆಗಿಯೇ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

    ಇದನ್ನೂ ಓದಿ: ರಾಜಸ್ತಾನದ ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿತು ಹನ್ಸಿಕಾ-ಸೋಹೈಲ್​ ಮದುವೆ

    ಭಾರತ್ ಟಾಕೀಸ್​ನಡಿ ಜೈ ಕುಮಾರ್, ಕೀರ್ತಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿವೇಕ್​ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ ಈ ಚಿತ್ರಕ್ಕಿದೆ.

    180 ಆಯ್ತು, ಈ ವರ್ಷ 200ರ ಕ್ಲಬ್​ ಸೇರುತ್ತದಾ ಕನ್ನಡ ಚಿತ್ರರಂಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts