More

    ಉಫ್‌…! ಮೇಕೆಯ ಕಾಪಾಡಲು ಇದೆಂಥ ಸಾಹಸನಪ್ಪಾ..?ವಿಡಿಯೋ ನೋಡಿ…

    ಅಸ್ಸಾಂ: ಕೆಲವರಿಗೆ ಸಾಹಸ ಮಾಡುವುದು ಎಂದರೆ ಅದೇನು ಪ್ರೀತಿಯೋ. ಜೀವ ಪಣಕ್ಕಿಟ್ಟಾದರೂ ಸೈ. ಸಾಹಸ ಮೆರೆಯುತ್ತಾರೆ.

    ಅಂಥದ್ದೇ ಒಂದು ಸಾಹಸ ಮಾಡಿದ್ದಾರೆ ಸಾಹಸಿಗರು. ಅದೆಂಥ ಸಾಹಸ ಅಂತೀರಾ? ಕೊಳವೆ ಬಾವಿಯೊಂದಕ್ಕೆ ಬಿದ್ದ ಮೇಕೆ ಮರಿಯನ್ನು ಬದುಕಿಸಲು ಜೀವ ಪಣಕ್ಕಿಟ್ಟ ಸಾಹಸವಿದು! ನಾಲ್ಕು ಮಂದಿ ಮಾಡಿರುವ ಈ ಮೈನವಿರೇಳಿಸುವ ಸಾಹಸವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋವನ್ನು ಅಸ್ಸಾಂ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹರ್ದಿ ಸಿಂಗ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಎಲ್ಲಿ ಎಂದು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹೇಳದಿದ್ದರೂ, ಸಾಹಸಿಗರು ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕೇಳಬಹುದಾಗಿದೆ.

    ಇದನ್ನೂ ಓದಿ: ಕಾರು ಬಿಟ್ಟು ಸೈಕಲ್​ನಲ್ಲೇ ಬಂದ ಸಿದ್ದರಾಮಯ್ಯ!

    ಕೊಳವೆ ಬಾರಿಯಲ್ಲಿ ಬಿದ್ದಿರುವ ಮೇಕೆ ಮರಿಯನ್ನು ರಕ್ಷಿಸಲು ಮುಂದಾಗುತ್ತಾರೆ ನಾಲ್ಕು ಮಂದಿ. ಅದರಲ್ಲಿ ಒಬ್ಬಾತ ಕೊಳವೆ ಬಾವಿಗೆ ತಮ್ಮ ಅರ್ಧಕ್ಕಿಂತ ಹೆಚ್ಚಿನ ಭಾಗದ ದೇಹವನ್ನು ಉಲ್ಟಾ ಒಳಗೆ ತೂರಿಸುತ್ತಾನೆ. ಈ ವೇಳೆ ಅವರ ಕಾಲುಗಳನ್ನು ಮಿಕ್ಕ ಮೂವರು ಹಿಡಿದುಕೊಂಡಿದ್ದಾರೆ.

    ಕೊಳವೆ ಬಾವಿಯೊಳಗೆ ತೂರಿಕೊಂಡ ಈ ವ್ಯಕ್ತಿ ತನ್ನ ಕೈಗೆ ಮೇಕೆ ಸಿಕ್ಕಿದೆ ಎಂದು ಹೇಳುತ್ತಲೇ ಆತನನ್ನು ಮೇಲೆತ್ತುವ ಕೆಲಸವನ್ನು ಮಿಕ್ಕ ಮೂರು ಮಂದಿ ಮಾಡುತ್ತಾರೆ. ಈ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ಅಪಾರ ಮೆಚ್ಚುಗೆ ಗಳಿಸುತ್ತಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts