More

    ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ

    ಸಿಂಧನೂರು: ಸಮಾಜದಲ್ಲಿನ ಇತರರ ಕಣ್ಣಿಗೆ ಕಾಣದ ದೃಶ್ಯಗಳನ್ನು ಸೆರೆ ಹಿಡಿಯುವವನೆ ನಿಜವಾದ ಛಾಯಾಗ್ರಾಹಕ.

    ಸಾಮಾನ್ಯ ದೃಶ್ಯವನ್ನುಕ್ಯಾಮರಾದಲ್ಲಿ ಸೆರೆ ಹಿಡಿದು ಅದಕ್ಕೊಂದು ಜೀವ ತುಂಬುವಲ್ಲಿ ಪೋಟೋಗ್ರಾಫರ್ ಯಶಸ್ವಿಯಾಗುತ್ತಾನೆಂದು ಇಲಕಲ್ ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ ಡಾ.ಬಸವರಾಜ ಗವಿಮಠ ಹೇಳಿದರು.

    ಇದನ್ನೂ ಓದಿ: ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ

    ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಭಾನುವಾರ ಸಿಂಧನೂರು ತಾಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ 184 ನೇ ವಿಶ್ವ ಛಾಯಾಗ್ರಾಹಣ ದಿನಾಚರಣೆ ಅಂಗವಾಗಿ ಅಸೋಸಿಯೇಷನ್‌ನ 21 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಛಾಯಾಚಿತ್ರಗಳು ಪ್ರತಿಯೊಂದು ಕ್ಷೇತ್ರಕ್ಕೂ ಅವಶ್ಯ. ಒಂದು ಫೋಟೊ ಸಹಸ್ರಾರು ಅಕ್ಷರಗಳಿಗೆ ಸಮ. ಅನಕ್ಷರಸ್ಥರ ಅಜ್ಞಾನ ಹೊಡೆದುಡಿಸುವ ಶಕ್ತಿ ಒಂದು ಚಿತ್ರಕ್ಕಿದೆ. ಇವತ್ತು ಛಾಯಾಗ್ರಾಹನ ಚಿತ್ರ ಎಲ್ಲ ವಿಧದ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿದೆ.

    ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು. ಫೋಟೋಗ್ರಾಫರ್ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಎನ್.ಮುರುಳಿಧರ ಖೋಡೆ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಛಾಯಾಗ್ರಾಹಕರ ಜೀವನ ಕಷ್ಟವಾಗಿದೆ.

    ಎಲ್ಲರು ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಹಣ ವ್ಯಯವು ಹೆಚ್ಚಾಗುತ್ತಿದೆ. ಸಣ್ಣ-ಪುಟ್ಟ ಫೋಟೋಗ್ರಾಫರ್ಸ್ ಅಷ್ಟು ಪ್ರಮಾಣದಲ್ಲಿ ಹಣ ತೊಡಗಿಸುವುದು ಕಷ್ಟ. ಆದರೂ ನಾವೆಲ್ಲ ಹೊಂದಿಕೊಳ್ಳವ ಅನಿವಾರ್ಯತೆಯು ಎದುರಾಗಿದೆಂದರು.

    ಅಸೋಸಿಯೇಷನ್ ಸಂಸ್ಥಾಪಕ ಬಾಬು ಕಾಟವಾ, ಗೌರವಾಧ್ಯಕ್ಷ ಜಿ.ಕೆ.ವಿಶ್ವನಾಥ ಚೌದರಿ, ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ರಾಯಚೂರು ಸಂಘದ ಅಧ್ಯಕ್ಷ ಅಕ್ಬರ್‌ಸಾಬ, ಲಿಂಗಸುಗೂರು ಅಧ್ಯಕ್ಷ ಚನ್ನಬಸವ ಹಿರೇಮಠ, ಮಸ್ಕಿ ಅಧ್ಯಕ್ಷ ಅಮರೇಶ ನಾಯಕ,

    ಸಿರವಾರ ಅಧ್ಯಕ್ಷ ಬೆಟ್ಟದ ಬಸವ ಮಾಡಗಿರಿ, ಪ್ರಹ್ಲಾದ ಕೆಂಗಲ್ ಇದ್ದರು. ಪರಶುರಾಮ ಪಾಟೀಲ್, ಮಹ್ಮದ್ ಚಳಗಿ, ಆನಂದ ಮೋಹನ್, ಸುರೇಶ ಸಜ್ಜನ್, ತಾಜುದ್ದೀನ್ ಛಾಯಾಗ್ರಾಹಕರಿಗೆ ಛಾಯಾಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts