More

    ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ

    ಸಿಂಧನೂರು: ದೃಶ್ಯಗಳನ್ನು ಕ್ಯಾಮರಾ ಮೂಲಕ ಸೆರೆ ಹಿಡಿಯುವ ಕಲೆಗಾರ ಛಾಯಾಗ್ರಾಹಕ. ಅಂಥವರ ಬದುಕಿಗೆ ಭದ್ರತೆ ಒದಗಿಸುವ ಕೆಲಸ ಸರ್ಕಾರ ಮಾಡಬೇಕೆಂದು ನಿವೃತ್ತ ಯೋಧ ಶ್ರೀಧರ ಮಡಿಕೇರಿ ಹೇಳಿದರು.

    ನಗರದಲ್ಲಿ ತಾಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್‌ ಅಸೋಸಿಯೇಷನ್‌ನಿಂದ ವಿಶ್ವ ಛಾಯಾಗ್ರಾಹಣ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ 20 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಛಾಯಾಗ್ರಾಹಣ ಛಾಯಾಚಿತ್ರಕಾರನಿಗೆ ತಾಳ್ಮೆ, ಸಹನೆ ಮತ್ತು ಏಕಾಗ್ರತೆ ಕಲಿಸುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಛಾಯಾಗ್ರಾಹಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಯುವ ಅಗತ್ಯವಿದೆ ಎಂದರು.

    ಫೋಟೊಗ್ರಾಫರ್ಸ್‌ ಅಸೋಸಿಯೇಷನ್ ತಾಲೂಕು ಉಪಾಧ್ಯಕ್ಷ ವೀರಾರೆಡ್ಡಿ ಜವಳಗೇರಾ ಮಾತನಾಡಿ, ಛಾಯಾಗ್ರಾಹಕರು ಚಿತ್ರರೂಪದ ಇತಿಹಾಸಕಾರರಾಗಿದ್ದಾರೆ. ಹಲವು ವರ್ಷಗಳಿಂದ ವೃತ್ತಿನಿರತ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಬಳಿ ಆ ಹಲವು ವರ್ಷಗಳ ಚಿತ್ರ ದಾಖಲೆಗಳಿರುತ್ತವೆ. ಜವಳಗೇರಾ ಗ್ರಾಮ ಛಾಯಾಗ್ರಾಹಣಕ್ಕೆ ವಿಶೇಷ ಕೊಡುಗೆ ನೀಡಿದೆಂದರು.

    ಅಸೋಸಿಯೇಷನ್ ಅಧ್ಯಕ್ಷ ಮುರುಳಿಧರ ಎನ್.ಖೋಡೆ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಉತ್ತಮ ಚಿತ್ರದ ಹಿಂದೆ ಛಾಯಾಗ್ರಾಹಕನ ಶ್ರಮವಿರುತ್ತದೆ. ಕ್ಯಾಮರಾಕ್ಕೆ ಸಂಬಂಧಿಸಿದ ತಾಂತ್ರಿಕ ಜ್ಞಾನದ ಜತೆಗೆ ಛಾಯಾಗ್ರಾಹಕನಿಗೆ ಬೇಕಾದ ವಿಶಿಷ್ಠ ದೃಷ್ಠಿಕೋನವೂ ಅತ್ಯುತ್ತಮ ಚಿತ್ರ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts