More

    ರಕ್ತದಾನ ಮಾಡಿ, ವ್ಯಕ್ತಿಯ ಜೀವ ಉಳಿಸಿ


    ಯಾದಗಿರಿ: ಅನೇಕ ಸನ್ನಿವೇಶಗಳಲ್ಲಿ ಒಂದು ಜೀವ ಉಳಿಯಲು ರಕ್ತ ಅವಶ್ಯಕವಾಗಿದೆ. ರಕ್ತದಾನ ಮಾಡುವುದರಿಂದ ಯಾವುದೇ ಆರೋಗ್ಯ ತೊಂದರೆಯಾಗುವುದಿಲ್ಲ, ಅದು ಇನ್ನೊಂದು ಜೀವ ರಕ್ಷಣೆಗೆ ಸಹಕಾರಿ ಎಂದು ನೇರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಶ್ರೀಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿಸಿದರು.


    ಪಟ್ಟಣದ ಕನಕ ಭವನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಜನ್ಮದಿನದ ಪ್ರಯುಕ್ತ ಟೀಮ್ ಎಸ್ಎನ್ಕೆ ವತಿಯಿಂದ ಹಮ್ಮಿಕೊಂಡಿದ ಬೃಹತ್ ರಕ್ತದಾನ ಮತ್ತು ನೇತ್ರದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರು ಸಾಕಷ್ಟು ಜನರಲ್ಲಿ ರಕ್ತದಾನ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ. ಅವುಗಳನ್ನು ಹೊಗಲಾಡಿಸಬೇಕು. ಆರೋಗ್ಯವಂತ ಯುವಕರು ಪ್ರತಿ 3ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಆರೋಗ್ಯ ಮತ್ತು ಮನಸ್ಸಿನಲ್ಲಿ ಹೊಸ ಚೇತನವು ಮೂಡುತ್ತದೆ ಎಂದರು.

    ಟೀಮ್ ಎಸ್ಎನ್ಕೆ ಅಧ್ಯಕ್ಷ ನರಸಪ್ಪ ಕವಡೆ, ಕಂದಕೂರು ಕುಟುಂಬದ ಸದಸ್ಯರು ತಮ್ಮ ಜೀವನವನ್ನು ಬಡವರ, ಶೋಷಿತರ ಏಳಿಗ್ಗೆಗೆ ಮೀಸಲಿಟ್ಟಿದ್ದಾರೆ. ಅದನ್ನು ಮುಂದುವರೆಸಿದ ಶಾಸಕ ಶರಣಗೌಡರು ಸಣ್ಣ ವಯಸ್ಸಿನಲ್ಲಿಯೇ ಕ್ಷೇತ್ರದ ಜನರ ಕ್ಷೇಮಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂಥ ವ್ಯಕ್ತಿಯ ಜನ್ಮದಿನವನ್ನು ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts