ಬೆಂಗಳೂರು: ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ದುಃಖದ ಕಡಲಲ್ಲಿ ಮುಳುಗಿದ್ದ ಮೇಘನಾ ರಾಜ್ ಬಾಳಲ್ಲಿ ಪುತ್ರನ ಆಗಮನ ಖುಷಿಯ ಅಲೆಯನ್ನು ಸೃಷ್ಟಿಸಿದೆ. ಸರ್ಜಾ ಮತ್ತು ಮೇಘನಾ ಕುಟುಂಬದಲ್ಲಿ ಜ್ಯೂನಿಯರ್ ಚಿರು ಹೊಸ ಭರವಸೆಯನ್ನು ಹುಟ್ಟು ಹಾಕಿದ್ದು, ಇದೇ ಸಂದರ್ಭದಲ್ಲಿ ಮೇಘನಾ, ಅಗಲಿರುವ ಪತಿ ಚಿರುಗೆ ಒಂದು ಭರವಸೆಯನ್ನು ನೀಡಿದ್ದಾರೆ.
ಗಂಡು ಮಕ್ಕಳನ್ನು ಬೆಳೆಸಬೇಕಾದ ರೀತಿಯ ಬಗ್ಗೆ ಮೇಘನಾ ಮಾಡಿರುವ ಪೋಸ್ಟ್ ಹೇಳುತ್ತಿದ್ದು, ಅದರ ವಿವರಣೆ ಹೀಗಿದೆ. ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನಾನು ಮಗನನ್ನು ಬೆಳೆಸುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಇನ್ಸ್ಟಾಗ್ರಾಂ ಸ್ಟೋರಿಯ ಮೂಲಕ ಮೇಘನಾ ರಾಜ್ ಚಿರುಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕರೊನಾ ಲಸಿಕೆ ಪಡೆಯಲು ಆನ್ಲೈನ್ ನೋಂದಣಿ ಅಗತ್ಯ; 12 ದಾಖಲೆಗಳ ಪೈಕಿ ಒಂದು ಅನಿವಾರ್ಯ
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಲೇ ಗಂಡು ಮಕ್ಕಳನ್ನ ಬೆಳೆಸಬೇಕಾದ ರೀತಿಯ ಬಗ್ಗೆ ಮೇಘನಾ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಮೇಘನಾ ನೀಡಿದ್ದಾರೆ.
ಚಿರು ಕುಟುಂಬಕ್ಕೆ ಜ್ಯೂನಿಯರ್ ಚಿರು ನಗವಿನ ಕಡಲನ್ನೇ ಹೊತ್ತು ತಂದಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಜ್ಯೂನಿಯರ್ ಚಿರು ಹಾಗೂ ಮೇಘನಾ ಸೇರಿದಂತೆ ಇಡೀ ಕುಟುಂಬಕ್ಕೆ ಮಹಾಮಾರಿ ಕರೊನಾ ವೈರಸ್ ಸೋಂಕು ತಗುಲಿತ್ತು. ಸಾವಿರಾರು ಅಭಿಮಾನಿಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಮೇಘನಾ ಕುಟುಂಬದ ಪರವಾಗಿ ಪ್ರಾರ್ಥಿಸಿದ್ದರು. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಆಸ್ಪತ್ರೆಯಲ್ಲೇ ಹೀರೋ ಪೋಸ್ ಕೊಟ್ಟ ನೃತ್ಯ ನಿರ್ದೇಶಕ ರೆಮೋ
ವಿಜೆ ಚಿತ್ರಾ ಪತಿ ಅರೆಸ್ಟ್: ಗಂಡನ ವರ್ತನೆಗೆ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದರಾ ಕಲಾವಿದೆ?
ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?