More

    Success Story: ಕ್ರಿಕೆಟಿಗನಾಗಲು ಬಯಸಿದ್ದ ಹೃದಯ್ ಕುಮಾರ್ ದಾಶ್ ಅಪ್ಪನ ಆಸೆಯಂತೆ ಕಂದಾಯ ಇಲಾಖೆ ಅಧಿಕಾರಿಯಾದ್ರು

    ಒಡಿಶಾ: ಅನೇಕ ಜನರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಯಾಗುವ ಕನಸನ್ನು ಹೊಂದಿರುತ್ತಾರೆ. ಆದರೆ ಕೆಲವರಿಗೆ ಮಾತ್ರ ತಮ್ಮ ಹೆಬ್ಬಯಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮ ಹಾಗೂ ತಾಳ್ಮೆಯಿಂದ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಸಾಕಷ್ಟು ಜನರಿದ್ದಾರೆ. ಹೀಗೆ ತಮ್ಮ ಬುದ್ಧಿವಂತಿಕೆ ಹಾಗೂ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ (ಐಆರ್‌ಎಸ್) ಭಾರತೀಯ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಹೃದಯ್ ಕುಮಾರ್ ದಾಶ್ ಒಡಿಶಾ ಮೂಲದ ನಿವಾಸಿಯಾಗಿದ್ದಾರೆ. ಇವರು  ರೈತಾಪಿ ಕುಟುಂಬದಲ್ಲಿ ಜನಿಸಿದ್ದರು. ಆರಂಭದಲ್ಲಿ ಕ್ರಿಕೆಟಿಗನಾಗಲು ಬಯಸಿದ್ದರು. ಆದರೆ ಹೃದಯ್​ ಕುಮಾರ್​ ಐಎಎಸ್,ಐಪಿಎಸ್ ಅಧಿಕಾರಿ ಆಗಬೇಕೆನ್ನುವುದು ಇವರ ತಂದೆಯ ಕನಸಾಗಿತ್ತು. ಅಪ್ಪನ ಆಸೆಯನ್ನು ಇಡೇರಿಸಲು ಪಣ ತೊಟ್ಟ ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಐಆರ್‌ಎಸ್ ಅಧಿಕಾರಿಯಾಗಿ ಹೃದಯ್ ಕುಮಾರ್ ದಾಶ್ ಈಡೇರಿಸುತ್ತಾರೆ.

    ದಾಶ್ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಶಾಲಾದಿನಗಳಲ್ಲಿಯೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ದಾಶ್ ಅಂತರ ಜಿಲ್ಲಾ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿಯೂ ಆಡಿದ್ದರು. ದಾಶ್ ಅವರ ತಂದೆ ಕೃಷಿಯನ್ನು ಮಾಡುತ್ತಿದ್ದರು. ಪಿಯುಸಿ ಪೂರ್ಣಗೊಳಿಸಿದ ನಂತರ ಮಗನ ವಿದ್ಯಾಭ್ಯಾಸಕ್ಕಾಗಿ ಇವರ ತಂದೆ ತಮ್ಮ ಬಳಿ ಇದ್ದ ಭೂಮಿಯನ್ನು ಮಾರಾಟ ಮಾಡಿದರು. ದಾಶ್ ಕ್ರಿಕೆಟ್ ಮೇಲಿನ ಆಸೆಯನ್ನು ಬದಿಗಿಟ್ಟು ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸಲು ನಿರ್ಧರಿಸುತ್ತಾರೆ.

    ಉತ್ಕಲ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳ ಇಂಟಿಗ್ರೇಟೆಡ್ ಎಂಸಿಎ ವ್ಯಾಸಂಗ ಮಾಡುವುದರ ಜತೆಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು.
    2015ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಿದ ದಾಶ್ 1079ರ ಅಖಿಲ ಭಾರತ ಶ್ರೇಣಿಯೊಂದಿಗೆ (AIR) ತೇಗರ್ಡೆಗೊಂಡರು. ಇದು ಇವರ ಮೂರನೇ ಪ್ರಯತ್ನವಾಗಿತ್ತು. ಪ್ರಸ್ತುತ ಭಾರತೀಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಬೆಂಗಳೂರಿನ ಮಹಿಳೆ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts