More

    ವೈದ್ಯಕೀಯ ಶುಲ್ಕವನ್ನು ಸರ್ಕಾರವೇ ಭರಿಸಲಿ-ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ

    ಕಂಪ್ಲಿ: ವೈದ್ಯಕೀಯ ಕಲಿಕೆಗೆ ಪರದೇಶಗಳಿಗೆ ಹೋಗುವುದನ್ನು ತಪ್ಪಿಸಲು ಸರ್ಕಾರವೇ ಶುಲ್ಕ ಭರಿಸಲಿ ಎಂದು ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಹೇಳಿದರು.

    ಇಲ್ಲಿನ ಕೊಟ್ಟಾಲ್ ರಸ್ತೆಯ ಕಾಲುವೆ ಬಳಿಯ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರವೇ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈಗೆಟುವ ಕ್ರಮ ಕೈಗೊಳ್ಳಲಿ. ಮೇಕೆದಾಟು ಹೋರಾಟ ನಿಲ್ಲಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಮೇಕೆದಾಟು ಹೋರಾಟಕ್ಕೆ ಯಶಸ್ಸು ದೊರಕುತ್ತದೆ.

    ಬೊಕ್ಕಸ ಖಾಲಿಯಾಗಿದ್ದು ಬಜೆಟ್‌ನಲ್ಲಿ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ಮಾ.19ಕ್ಕೆನಿಗದಿಯಾದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಹೊಂದಿದ ಕಾಂಗ್ರೆಸ್ ವಶವಾಗಲಿದೆ. ಶಾಸಕರು ಕಾರ್ಯಕರ್ತರನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಹಿತ ದೃಷ್ಟಿಯಿಂದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಹಕರಿಸಿ ಸಾಗಬೇಕು ಎಂದು ಶಾಸಕರಿಗೆ ಪರೋಕ್ಷವಾಗಿ ಸಲಹೆ ನೀಡಿದರು.

    ತುಂಗಭದ್ರಾ ನದಿ ತಟದಲ್ಲಿ ಪಾವಟಿಗೆ ನಿರ್ಮಿಸುವ ಕಾಮಗಾರಿ ವೀಕ್ಷಿಸಿದರು. 18ನೇ ವಾರ್ಡ್‌ನ ಪೀರಲುದೇವರು ಕೂಡಿಸುವ ಕಟ್ಟಡ ರ್ಜೀರ್ಣೋದ್ಧಾರಕ್ಕಾಗಿ, ಎಮ್ಮಿಗನೂರಿನ ಆಂಜನೇಯ ದೇವಸ್ಥಾನಕ್ಕೆ ಗ್ರಿಲ್ ಕೂಡಿಸಲು ದೇಣಿಗೆ ನೀಡಿದರು. ಕಾಂಗ್ರೆಸ್ ಪ್ರಮುಖರಾದ ಇಟಗಿ ಬಸವರಾಜಗೌಡ, ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‌ಬಾಷಾ, ಎಂ.ರಾಘವೇಂದ್ರ, ಬಿ.ನಾರಾಯಣಪ್ಪ, ಕರಿಬಸವನಗೌಡ, ಎಂ.ಉಸ್ಮಾನ್, ಕರೇಕಲ್ ಮನೋಹರ, ಹೋಟೆಲ್ ಶೆಕ್ಷಾವಲಿ, ಹೊಸಕೋಟೆ ಜಗದೀಶ್, ಕುರುಗೋಡು ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts