More

    ಡಿ.1ರಿಂದ ವೈದ್ಯಕೀಯ ಕಾಲೇಜುಗಳು ಶುರು

    ಚಿತ್ರದುರ್ಗ: ರಾಜೀವ್‌ಗಾಂಧಿ ವಿವಿ ವ್ಯಾಪ್ತಿ ಎಲ್ಲ ಶೈಕ್ಷಣಿಕ ಸಂಸ್ಥೆಗಳೂ ಡಿಸೆಂಬರ್ 1ರಿಂದ ಕಾರ‌್ಯಾರಂಭ ಮಾಡಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಚಿತ್ರದುರ್ಗದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಶುಕ್ರವಾರ ಸ್ಥಳ ಪರಿಶೀಲಿಸಿ ಮಾತನಾಡಿ,ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲಾ-ಕಾಲೇಜುಗಳ ಪೈಕಿ ಕಾಲೇಜುಗಳ(ನ.17)ಆರಂಭಕ್ಕೆ ಚರ್ಚೆ ನಡೆದಿದೆ. ಆದರೆ ವೈದ್ಯಕೀಯ ಕಾಲೇಜು,ನರ್ಸಿಂಗ್ ಮತ್ತಿತರ ಪ್ಯಾರಾ ಮೆಡಿಕಲ್ ಕೋರ್ಸ್‌ಗಳ ತರಗತಿಗಳು ಆರಂಭವಾಗಲಿವೆ. ಶಾಲೆಗಳನ್ನು ಆರಂಭಿಸುವ ಕುರಿತಂತೆ ಇನ್ನಷ್ಟು ಸಮಯ ಬೇಕಾಗಬಹುದೆಂದರು.

    ರಾಜ್ಯದಲ್ಲಿ ಡಿಸೆಂಬರ್ ಅಂತ್ಯದೊಳಗೆ ಮೂರು ವೈದ್ಯಕೀಯ ಕಾಲೇಜುಗಳಿಗೆ ಶಂಕು ಸ್ಥಾಪನೆ ಆಗಲಿವೆ. ಚಿಕ್ಕಬಳ್ಳಾಪುರ ಕಾಲೇಜಿಗೆ ಶಂಕುಸ್ಥಾಪನೆ ಆಗಿದೆ. ಶುಕ್ರವಾರ ಹಾವೇರಿ ಕಾಲೇಜಿಗೆ ನಡೆಯಲಿದ್ದು,ಯಾದಗಿರಿ,ಚಿಕ್ಕಮಗಳೂರು ಕಾಲೇಜುಗಳಿಗೂ ಭೂಮಿಪೂಜೆ ನಡೆಯಲಿದೆ. ರಾಜ್ಯದೆಲ್ಲ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜನ್ನು ನಿರ್ಮಿಸಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದರು.

    ಚಿತ್ರದುರ್ಗ ಕಾಲೇಜು ನಿರ್ಮಾಣ ವೆಚ್ಚವನ್ನು ರಾಜ್ಯಸರ್ಕಾರ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಭರಿಸಲಾಗುವುದು. ಟೆಂಡರ್ ಪೂರ್ಣ ಬಳಿಕ ಶೀಘ್ರದಲ್ಲೇ ಸಿಎಂ ಇಲ್ಲಿಯ ಕಾಲೇಜಿಗೆ ಭೂಮಿ ನೆರವೇರಿಸಲಿದ್ದಾರೆ. ಜಿಲ್ಲಾಸ್ಪತ್ರೆಯ ಈ ಸ್ಥಳ ಕಾಲೇಜಿಗೆ ಅತ್ಯಂತ ಪ್ರಶಸ್ತ ವಾಗಿದೆ. ಕಾಲೇಜು ನಿರ್ಮಾಣ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಹಾಸಿಗೆ ಸಾಮರ್ಥ್ಯ 450ರಿಂದ 700ಕ್ಕೆ ಹೆಚ್ಚಾಗಲಿದೆ ಹಾಗೂ ಕಾಲೇಜಿಗೆ ಪೂರಕವಾಗಿ ಪ್ಯಾರಾ ಮೆಡಿಕಲ್ ಕೋರ್ಸ್‌ಗಳನ್ನೂ ಪ್ರಾರಂಭಿಸುವುದಾಗಿ ಹೇಳಿದರು.

    ರಾಜ್ಯದ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯನ್ನು ಬೇರೊಬ್ಬರಿಗೆ ಗುತ್ತಿಗೆ ಕೊಡಬೇಕಿದೆ. ಅಲ್ಲಿಯವರೆಗೂ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ಸೂಚಿಸಲಾಗಿದೆ. ವಿಶ್ವ ಬ್ಯಾಂಕ್ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲ ಪಿಎಚ್‌ಸಿಗಳನ್ನು ಹಂತ ಹಂತವಾಗಿ ಮೇಲ್ದದರ್ಜೆಗೆ ಏರಿಸಿ ದಿನದ 24 ಗಂಟೆ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು. ಕೋವಿಡ್ ವಿರುದ್ಧ ಲಸಿಕೆ ಮಾರ್ಚ್‌ವೊಳಗೆ ಬರು ವ ನಿರೀಕ್ಷೆ ಇದೆ ಎಂದ ಅವರು,ಲಸಿಕೆ ವಿತರಣೆಗೆ ಅಗತ್ಯ ವ್ಯವಸ್ಥೆ ಇದೆ ಎಂದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ,ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಟಿ.ರಘುಮೂರ್ತಿ, ಸಂಸದ ಎ.ನಾರಾಯಣ ಸ್ವಾಮಿ, ಡಿಸಿ ಕವಿತಾ ಎಸ್.ಮನ್ನೀಕೇರಿ, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಸಿಇಒ ಟಿ.ಯೋಗೇಶ್, ಡಿಎಸ್ ಡಾ.ಬಸವರಾಜಪ್ಪ ಮೊದಲಾದವರು ಇದ್ದರು. ಈ ವೇಳೆ ಸಂಘ-ಸಂಸ್ಥೆ ಪ್ರಮುಖರು ಕಾಲೇಜು ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕಾಗಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

    ಮರೆಯಾದ ಸಾಮಾಜಿಕ ಅಂತರ: ಸಚಿವದ್ವಯರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾಮಾಜಿಕ ಅಂತರ ಮರೆಯಾಗಿತ್ತು. ಆರೋಗ್ಯ ಸಚಿವರಾದ ಬಳಿಕ ಸುಧಾಕರ್ ಮೊದಲ ಭೇಟಿ ಇದಾಗಿದ್ದರೂ ಇಲ್ಲಿಯ ಸಮಸ್ಯೆಗಳನ್ನು ಆಲಿಸಲು ಇನ್ನೊಮ್ಮೆ ಬರುವೆ. ಈಗ ಕಾಲೇಜು ಸ್ಥಳ ಪರಿಶೀಲನೆಗೆ ಬಂದಿದ್ದೇನೆ ಎಂದರು.

    ರಸ್ತೆ ಅಪಘಾತ ತಡೆ: ತುರ್ತು ವರದಿ ಸಲ್ಲಿಕೆಗೆ ಡಿಸಿ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts