More

    video/ ‘ಮಾಯಾರ್ ಕಿಂಗ್’ ಗಾಂಭೀರ್ಯಕ್ಕೆ ನೆಟ್ಟಿಗರು ಫಿದಾ!

    ಗುಂಡ್ಲುಪೇಟೆ: ಕೆಕ್ಕನಹಳ್ಳ ಗೇಟ್ ಬಳಿ ‘ಮಾಯಾರ್ ಕಿಂಗ್’ ಎಂಬ ಹುಲಿ ರಸ್ತೆ ದಾಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಲಿಯ ಗಾಂಭೀರ್ಯ ನಡೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

    ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕರ್ನಾಟಕ- ತಮಿಳುನಾಡು ಗಡಿಭಾಗದ ಮಾಯಾರ್ ನದಿ ತಟವನ್ನು ವಾಸ ಸ್ಥಳವಾಗಿರಿಸಿಕೊಂಡಿರುವ ಈ ಹುಲಿಯನ್ನು ‘ಮಾಯಾರ್‌ ಕಿಂಗ್’ ಎಂದೇ ಕರೆಯಲಾಗುತ್ತೆ. ಮೂರು ದಿನಗಳ ಹಿಂದೆ ಈ ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಮಾಯಾರ್ ಕಿಂಗ್ ಹಾದುಹೋಗುವ ವಿಡಿಯೋ ಮಾಡಿದ್ದಾರೆ.

    ಇದನ್ನೂ ಓದಿರಿ video/ ಆನೆ ನಡೆದದ್ದೇ ದಾರಿ.. ರೈಲ್ವೆ ಕಂಬಿಗಳ ಬ್ಯಾರಿಕೇಡ್ ಕಿತ್ತೆಸೆದ ಒಂಟಿ ಸಲಗ!

    ಈ ಹುಲಿ ಮಾಯಾರ್ ನದಿ ಸೇರುವ ಹಳ್ಳದ ನೀರಿನ ಬಳಿಯಲ್ಲೇ ವಾಸಿಸುತ್ತದೆ. ಹಿಂದೆ ಇದ್ದ ಜಿಲ್ಲಾಧಿಕಾರಿ‌ ಕಾವೇರಿ ಅವರು ಇಲ್ಲಿಗೆ ಭೇಟಿ ನೀಡಿದ್ದಾಗಲೂ ಮಾಯಾರ್ ಕಿಂಗ್ ದರ್ಶನ ನೀಡಿತ್ತು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ತಿಳಿಸಿದ್ದಾರೆ.

    ಪ್ರಿನ್ಸ್ ಎಂಬ ಹುಲಿ ಮನುಷ್ಯರನ್ನು ಕಂಡು ವಿಚಲಿತಗೊಳ್ಳದೆ ಗತ್ತು ತೋರಿ ಅತಿ ಹೆಚ್ಚು ಪೋಟೋ ಕ್ಲಿಕ್ಕಿಸಿಕೊಂಡಿರುವ ವ್ಯಾಘ್ರ ಎಂಬ ಕೀರ್ತಿಗೆ ಪಾತ್ರವಾದಂತೆ ಮಾಯಾರ್ ಕಿಂಗ್ ಗಾಂಭೀರ್ಯದ ನಡೆಯೂ ಹಲವರಿಗೆ ಇಷ್ಟವಾಗಿದೆ. ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಬಂಡೀಪುರದಲ್ಲಿ 'ಮಾಯಾರ್ ಕಿಂಗ್' ಹುಲಿಯ ನಡಿಗೆ ಕಣ್ತುಂಬಿಕೊಳ್ಳಿ

    ಬಂಡೀಪುರದಲ್ಲಿ 'ಮಾಯಾರ್ ಕಿಂಗ್' ಹುಲಿಯ ನಡಿಗೆ ಕಣ್ತುಂಬಿಕೊಳ್ಳಿಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕರ್ನಾಟಕ- ತಮಿಳುನಾಡು ಗಡಿಭಾಗದಲ್ಲಿ 'ಮಾಯಾರ್ ಕಿಂಗ್' ಹೆಸರಿನ ಹುಲಿಯ ಗಾಂಭೀರ್ಯ ನಡಿಗೆಯನ್ನೊಮ್ಮೆ ಕಣ್ತುಂಬಿಕೊಳ್ಳಿ. ಕೆಕ್ಕನಹಳ್ಳ ಗೇಟ್ ಬಳಿ 'ಮಾಯಾರ್ ಕಿಂಗ್ ಹುಲಿ' ರಸ್ತೆ ದಾಟುತ್ತಿದ್ದ ದೃಶ್ಯವನ್ನು ವಾಹನ ಸವಾರರು ವಿಡಿಯೋ ಮಾಡಿದ್ದಾರೆ. #MayarKing #Tiger #Bandipura

    Posted by Vijayavani on Wednesday, July 22, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts