More

    ಸತಿಪತಿ ಒಂದಾಗಿ ಸುಖಕರ ಜೀವನ ಸಾಗಿಸಲಿ

    ಯಲಬುರ್ಗಾ: ಸಾಮೂಹಿಕ ವಿವಾಹಗಳಿಂದ ವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೇ ಆರ್ಥಿಕ ಹೊಣೆ ಕಡಿಮೆಯಾಗಿ ಸುಖಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥಾನ ಹಿರೇಮಠದ ಶ್ರೀಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಕರಮುಡಿ ಗ್ರಾಮದ ಶ್ರೀ ಹುಚ್ಚಿರೇಶ್ವರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಮದುವೆ ನಂತರ ಕೆಲ ಅಜ್ಞಾನಿಗಳು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳದೇ ಮನೆಯಿಂದ ಹೊರಹಾಕುತ್ತಿದ್ದಾರೆ.ಆದರೆ, ನೀವು ಆ ತಪ್ಪು ಮಾಡಬೇಡಿ. ನಮಗೆ ಜೀವದಾನ ಮಾಡಿದ ತಂದೆ-ತಾಯಿ ದೇವರ ಸ್ವರೂಪ. ಅವರನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ. ಕರಮುಡಿ ಗ್ರಾಮ ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರಾಗಿ ಮಾರ್ಪಟ್ಟಿದೆ ಎಂದರು.

    ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ನಿಡಗುಂದಿಕೊಪ್ಪದ ಶ್ರೀ ಚನ್ನಬಸವ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿದರು. ಮಲ್ಲಾಪುರದ ಬಸಯ್ಯ ಸ್ವಾಮೀಜಿ, ಪ್ರಮುಖರಾದ ಶಕುಂತಲಾ ಪಾಟೀಲ್, ವೀರಣ್ಣ ನಿಂಗೋಜಿ, ಶಿವಪುತ್ರಪ್ಪ ಮಲಿಗೋಡದ, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ಶ್ಯಾಮೀದ್‌ಸಾಬ್ ಮುಲ್ಲಾ, ವೀರಣ್ಣ ಮಾನಶೆಟ್ಟಿ, ಕಳಕಪ್ಪ ಅಬ್ಬಿಗೇರಿ, ಶಿವಪ್ಪ ಉಳ್ಳಾಗಡ್ದಿ, ಬಸವರಾಜ ಬಲಕುಂದಿ, ಕರಿಬಸಯ್ಯ ಶಾಸ್ತ್ರಿ, ವಿನಯ್ ಪಾಟೀಲ್, ದ್ಯಾಮಣ್ಣ ಬಡಿಗೇರ್, ಗಂಗಪ್ಪ ಹವಳಿ, ವೀರಣ್ಣ ಅಬ್ಬಿಗೇರಿ ಇತರರಿದ್ದರು.

    ಇದನ್ನೂ ಓದಿ: https://www.vijayavani.net/tag/marriage/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts