More

    ಸುಖ-ದುಃಖ ಸಮಾನವಾಗಿ ಸ್ವೀಕರಿಸಿ

    ಕೂಡ್ಲಿಗಿ: ಮಾನಸಿಕವಾಗಿ ಮಹಿಳೆಯರು ಸದೃಢವಾಗಿದ್ದಾಗ ಮಾತ್ರ ಕುಟುಂಬವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶೆ ಸಿ.ಮಹಾಲಕ್ಷ್ಮೀ ಹೇಳಿದರು.

    ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಗುರವಾರ ಏರ್ಪಡಿಸಿದ್ದ ಮಹಿಳೆ ಮತ್ತು ಕಾನೂನು, ಮಹಿಳೆಯರಿಗಾಗಿ ಮಾನಸಿಕ ಆರೋಗ್ಯದ ಕುರಿತು ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸುಖ, ದುಃಖವನ್ನು ಸಮವಾಗಿ ಸ್ವೀಕರಿಸಿದಾಗ ಮಾತ್ರ ಮಾನಸಿಕವಾಗಿ ಗಟ್ಟಿಯಾಗಲು ಸಾಧ್ಯ. ಮಹಿಳೆಯರು ಧನಾತ್ಮಕ ಚಿಂತನೆಗಳನ್ನೇ ಮಾಡಬೇಕು.ಎಲ್ಲರೂ, ನಮ್ಮವರೇ ಎನ್ನುವ ಭಾವ ಮೂಡಿದಾಗ ಮಾತ್ರ ಸುತ್ತಲಿನ ಪರಿಸರ ಸ್ನೇಹಮಯವಾಗಿರುತ್ತದೆ ಎಂದರು.
    ಪ್ಯಾನಲ್ ವಕೀಲೆ ಕೆ.ಎಚ್.ಎಂ.ಶೈಲಜಾ ಮಾತನಾಡಿ, ಸಂಸಾರವೆಂಬುದು ಸಾರ ಭರಿತವಾಗಿರಬೇಕು.

    ಪರಸ್ಪರ ಅನ್ಯೋನ್ಯ ಸಂಬಂಧಗಳಿಂದ ಮಾತ್ರ ಕುಟುಂಬಗಳು ಉಳಿಯುತ್ತವೆ. ಸಣ್ಣ,ಪುಟ್ಟ ಮನಸ್ತಾಪ ಸಾಮಾನ್ಯ, ಅದನ್ನೇ ದೊಡ್ಡ ವಿಷಯ ಮಾಡಿ ಕೋರ್ಟ್ ಮೆಟ್ಟಿಲು ಏರಬೇಡಿ. ಬದಲಿಗೆ ಬಂದ ಸಮಸ್ಯೆಗಳನ್ನು ಮೆಟ್ಟಿ ನಿಂತು, ಮಹಿಳೆಯರು ಪುರುಷರಷ್ಟೇ ಸಬಲೆಯರು ಎಂದು ತೋರಿಸಬೇಕು ಎಂದರು.

    ಮಾನಸಿಕ ತಜ್ಞೆ ಡಾ.ಕಾವ್ಯಾ, ಆಪ್ತ ಸಮಾಲೋಚಕ ಡಾ.ಮಾರೇಶ್, ಪ್ರಭಾರ ಸಿಡಿಪಿಒ ಮಾಲುಂಬಿ, ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ, ವಕೀಲರ ಸಂಘದ ಉಪಾಧ್ಯಕ್ಷ ಎಚ್.ವೆಂಕಟೇಶ್, ಟಿ.ರಮೇಶ್, ಅನ್ನಪೂರ್ಣ, ಪ್ಯಾನಲ್ ವಕೀಲೆ ಜಯಮ್ಮ, ಎಸ್.ಅನುಪಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts