More

    ಕರೊನಾ ಸಂಕಷ್ಟ ಮುಗಿಯೋತನಕ ಕೋಟ್​, ಗೌನ್​ ಹಾಕ್ಬೇಡಿ…!

    ನವದೆಹಲಿ : ಕರೊನಾ ವೈರಸ್ ಭಾರತೀಯ ನ್ಯಾಯಾಲಯಗಳ ಕಾರ್ಯಚಟುವಟಿಕೆಗಳಲ್ಲಿ ಹಲವು ಬದಲಾವಣೆಗಳನ್ನುಂಟು ಮಾಡಿದೆ.
    ಕರೊನಾವೈರಸ್ ಹರಡುವಿಕೆ ತಡೆಗಟ್ಟಲು ಸರ್ವೋಚ್ಚ ನ್ಯಾಯಾಲಯ ಕೋರ್ಟ್ ಕಲಾಪಗಳಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಲು ಲಾಕ್​ಡೌನ್ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್​​​​ಗಳಲ್ಲಿ ಇದೀಗ ನ್ಯಾಯಾಧೀಶರು ಮತ್ತು ವಕೀಲರಿಗೆ ಸುಪ್ರೀಂ ಕೋರ್ಟ್ ವಸ್ತ್ರ ಸಂಹಿತೆ ಬದಲಾಯಿಸಿ ಸೂಚನೆ ಹೊರಡಿಸಲು ನಿರ್ಧರಿಸಿದೆ.

    ಇದನ್ನೂ ಓದಿ: ಹೆರಿಗೆ ಆಸ್ಪತ್ರೆಗೆ ಪೊಲೀಸರ ವೇಷದಲ್ಲಿ ನುಗ್ಗಿ ಗುಂಡಿನ ದಾಳಿ, 16 ಜನರ ಸಾವು


    ಕೋವಿಡ್ – 19 ಹರಡುವುದನ್ನು ತಡೆಗಟ್ಟಲು ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಗೌನ್ ಧರಿಸದಂತೆ ಸೂಚನೆಗಳನ್ನು ಶೀಘ್ರದಲ್ಲೇ ನೀಡಲಾಗುವುದು ಸಿಜೆಐ ಎಸ್.ಎ. ಬೋಬ್ಡೆ ಹೇಳಿದ್ದಾರೆ. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
    ಬುಧವಾರ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳು ಸಾಂಪ್ರದಾಯಿಕ ಕಪ್ಪು ಕೋಟು ಮತ್ತು ಗೌನ್ ಧರಿಸದೆ ಮುಕ್ತ ನ್ಯಾಯಾಲಯದಲ್ಲಿ ಆಸೀನರಾಗಿದ್ದರು. ವಸ್ತ್ರ ಸಂಹಿತೆ ಪಾಲನೆಯಾಗದಿರುವದು ಬಹುಶಃ ಇದೇ ಮೊದಲ ಬಾರಿಗೆ ಎನ್ನಲಾಗಿದೆ.

    ಇದನ್ನೂ ಓದಿ: ಮೊನ್ನೆ ಕಾಣಿಸಿಕೊಂಡವನು ನಿಜವಾದ ಕಿಮ್ ಅಲ್ವಾ? ಅವನ ಡುಪ್ಲಿಕೇಟಾ?


    ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಎಲ್ಲರ ಪಾತ್ರ ಪ್ರಮುಖವಾಗಿದೆ. ವಕೀಲರು, ನ್ಯಾಯಮೂರ್ತಿಗಳು, ಕೋರ್ಟ್ ಸಿಬ್ಬಂದಿ ಎಲ್ಲರೂ ಜಾಗೃತಿ ವಹಿಸಬೇಕು. ಗೌನ್​ಗೆ ವೈರಸ್ ತಗುಲುವ ಸಾಧ್ಯತೆ ಇದ್ದು, ತಾತ್ಕಾಲಿಕವಾಗಿ ವಸ್ತ್ರ ಸಂಹಿತೆ ಬದಲಾದರೆ ಉತ್ತಮ ಎಂದು ಅಭಿಪ್ರಾಯಪಟ್ಟ ಬೊಬ್ಡೆ, ವೈರಸ್ ಹರಡುವಿಕೆ ತಡೆಗಟ್ಟಲು ನಿಲುವಂಗಿ ಧರಿಸದಂತೆ ಸೂಚನೆಗಳನ್ನು ಶೀಘ್ರವೇ ಹೊರಡಿಸಲಾಗುವುದು ಎಂದರು. (ಏಜನ್ಸೀಸ್)

    ನೀವು ಇಂಥದ್ದೇ ಬೆಳೆ ಬೆಳೆಯಬೇಕು, ಸರ್ಕಾರದಿಂದಲೇ ನಿರ್ಧಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts