More

    ಮೊನ್ನೆ ಕಾಣಿಸಿಕೊಂಡವನು ನಿಜವಾದ ಕಿಮ್ ಅಲ್ವಾ? ಅವನ ಡುಪ್ಲಿಕೇಟಾ?

    ಪ್ಯೊಂಗ್ಯಾಂಗ್: ಕರೊನಾ ಅಟ್ಟಹಾಸದ ಜತೆ ಜತೆಗೇ ಶುರುವಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​​ರ ಕತ್ತಲು ಬೆಳಕಿನ ಆಟ ಇನ್ನೂ ಮುಂದುವರಿದೇ ಇದೆ ಎನ್ನಲಾಗುತ್ತಿದೆ.
    ಜಗತ್ತಿನ ದಿಗ್ಗಜ ರಾಷ್ಟ್ರ ನಾಯಕರ ಹಾಗೂ ಜನ ಸಾಮಾನ್ಯರ ಮನಸ್ಸನ್ನು ಆಕ್ರಮಿಸಿಕೊಂಡ ಕುತೂಹಲಕಾರಿ ರಹಸ್ಯಗಳಲ್ಲಿ ಒಂದು ಕಿಮ್ ಜಾಂಗ್ ಉನ್ ಇನ್ನೂ ಜೀವಂತವಾಗಿದ್ದಾರೆಯೇ ಎಂಬುದು. ಏಪ್ರಿಲ್ 11 ರ ನಂತರ ಏಕಾಏಕಿ ಕಣ್ಮರೆಯಾಗಿ ದೊಡ್ಡ ಸುದ್ದಿಯಾಗಿದ್ದರು ಈ ಸರ್ವಾಧಿಕಾರಿ. ಕಿಮ್​ ಆರೋಗ್ಯ ಹದಗೆಟ್ಟಿದೆ…, ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ… ಅಷ್ಟೇ ಏಕೆ ಕೆಲ ಮಾಧ್ಯಮಗಳಂತೂ ಕಿಮ್ ಸತ್ತೇ ಹೋಗಿದ್ದಾರೆ ಅಧಿಕೃತ ಘೋಷಣೆಯೊಂದೇ ಹೊರ ಬೀಳುವುದು ಬಾಕಿ ಇದೆ ಅಂತೆಲ್ಲ ಬರೆದಿದ್ದವು. ಇವೆಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಮೇ 2 ರಂದು ಮತ್ತೆ ಏಕಾಏಕಿ ಪ್ರತ್ಯಕ್ಷವಾಗಿದ್ದ ಕಿಮ್ ತಮ್ಮ ಬಗ್ಗೆ ಇದ್ದ ಎಲ್ಲ ವದಂತಿ, ಊಹಾಪೋಹಗಳಿಗೆ ತಿಲಾಂಜಲಿ ಇಟ್ಟಿದ್ದರು. ಆದರೆ ಈಗ ಅವರ ಮೇಲೆ ಮತ್ತೊಂದು ಅನುಮಾನ ಶುರುವಾಗಿದೆ.

    ಇದನ್ನೂ ಓದಿ: ಶಾಕಿಂಗ್ ನ್ಯೂಸ್…! ಜುಲೈ ಕೊನೆಗೆ ಗರಿಷ್ಟ ಮಟ್ಟಕ್ಕೇರಲಿದೆ ಕರೊನಾ : ಡಬ್ಲುಎಚ್​​ಒ
    ಏನದು ಅನುಮಾನ? : ಅಂದು ಕಾರ್ಖಾನೆ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಾತ ನಿಜವಾದ ಕಿಮ್ ಜಾಂಗ್ ಉನ್ ಹೌದೋ ಅಲ್ಲವೋ ಎಂಬುದೇ ಈ ಅನುಮಾನ. ಅಂದು ಕಾಣಿಸಿಕೊಂಡ ಆ ವ್ಯಕ್ತಿ ಕಿಮ್ ಅಲ್ಲ ಎಂಬ ವಾದ ಇದೀಗ ಶುರುವಾಗಿದೆ. ಅಂದು ಆ ಕಾರ್ಖಾನೆ ಉದ್ಘಾಟಿಸುತ್ತಿರುವ ಕಿಮ್ ಫೋಟೊಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಿಮ್​​ನಂತೆಯೇ ಕಾಣುವ ಇನ್ನೂ ಕೆಲ ವ್ಯಕ್ತಿಗಳಿರುವ ಸಾಧ್ಯತೆಯ ಬಗ್ಗೆ ಸುಳಿವು ನೀಡುತ್ತವೆ. ಅಂದು ಕಾಣಿಸಿಕೊಂಡಾತ ನಿಜವಾದ ಕಿಮ್ ಜಾಂಗ್ ಅಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ.
    ಇತರ ಸರ್ವಾಧಿಕಾರಿಗಳಾದ ಅಡಾಲ್ಫ್ ಹಿಟ್ಲರ್, ಸದ್ದಾಂ ಹುಸೇನ್​ರಂತೆಯೇ ಕಿಮ್ ಕೂಡ ಡುಪ್ಲಿಕೇಟ್ ವ್ಯಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
    ಟ್ವಿಟರ್​​ನಲ್ಲಿ ಕಾಣಿಸಿಕೊಂಡ, ಆ ಕೆಲವು ಫೋಟೋಗಳು ಆ ವ್ಯಕ್ತಿಯ ಕಿವಿಯ ಭಾಗ, ಹಲ್ಲು, ತಲೆಗೂದಲು ನೈಜ ಕಿಮ್​​ನ ಭಾವಚಿತ್ರಕ್ಕೆ ಹೋಲಿಕೆಯಾಗುವುದಿಲ್ಲ ಎನ್ನಲಾಗಿದ್ದು, ಕಾರ್ಖಾನೆ ಉದ್ಘಾಟನೆಗೆ ಕಿಮ್ ಬದಲಿಗೆ ಅವರ ಪ್ರತಿರೂಪದಂತಿರುವಾತ ಬಂದಿದ್ದ ಎನ್ನಲಾಗುತ್ತಿದೆ.
    ನೋಡಲು ತಮ್ಮಂತೆಯೇ ಇರುವ ಹಲವರನ್ನು ಕಿಮ್ ವಿವಿಧ ಸಾರ್ವಜನಿಕ ಸಮಾರಂಭಗಳಿಗೆ, ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: ತಿರುವನಂತಪುರದಿಂದ ಕೊಚ್ಚಿಗೆ ಹೃದಯ ಸಾಗಿಸಿದ ಪೊಲೀಸರು

    ಕೆಲ ಭಾವಚಿತ್ರಗಳನ್ನು ಬಿಟ್ಟರೆ ಇದಕ್ಕೆ ಪುಷ್ಠಿ ನೀಡುವ ಮತ್ತಾವ ಮಹತ್ವದ ದಾಖಲೆಗಳಿಲ್ಲ. ಈ ಫೋಟೊಗಳಲ್ಲಿ ಕೂಡ ವ್ಯತ್ಯಾಸ ಗುರುತಿಸಬಹುದಾಗಿದ್ದು, ಅದು ಕಿಮ್ ಪ್ರತಿರೂಪ (ಡುಪ್ಲಿಕೇಟ್)ವೇ ಎಂಬ ವಾದ ತೀವ್ರ ಚರ್ಚೆಗೆ ಗ್ರಾಸವಾಗಿದೆ.
    ಕಿಮ್ ಈ ಹಿಂದೆ ಹಲವು ಬಾರಿ ಮತ್ತು ಶತ್ರುಗಳ ಹತ್ಯೆಯಂತಹ ಪ್ರಯತ್ನಗಳನ್ನು ತಡೆಯಲು ಡುಪ್ಲಿಕೇಟ್​ಗಳನ್ನು ಬಳಸುತ್ತಾರೆ ಎನ್ನಲಾಗುತ್ತಿದೆ. ಹೋಲಿಕೆಗಾಗಿ ಬಳಸಲಾಗುವ ಕೆಲ ಫೋಟೋಗಳು ಕನಿಷ್ಟ ಒಂದು ದಶಕದಷ್ಟು ಹಳೆಯದಾಗಿರಬಹುದು ಮತ್ತು ಎತ್ತರ, ತೂಕ, ಆಹಾರ, ಹಲ್ಲಿನ ರಚನೆ ಬದಲಾವಣೆಯಾಗುತ್ತವೆ ಎಂಬುದೂ ಗಮನಿಸಬೇಕಾದ ಸಂಗತಿಯೇ ಅಗಿದೆ.
    ಬಹುತೇಕ ಸರ್ವಾಧಿಕಾರಿಗಳದ್ದು ಆಡಳಿತದಷ್ಟೇ ಜೀವನವೂ ಕುತೂಹಲಕಾರಿಯೇ. ಕಿಮ್ ಕೂಡ ಇದಕ್ಕೆ ಹೊರತಾಗಿಲ್ಲ..‘

    ‘ಟೆಸ್ಟ್ ಕ್ರಿಕೆಟ್‌ನ ದ್ವಿತೀಯ ಇನಿಂಗ್ಸ್‌ನಂತಿದೆ ಕರೊನಾ’ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts