More

    ನಕಲಿ ದಾಖಲೆ ನೀಡಿ ದೂರು ನೀಡಿದವರ ಮೇಲೆ ಕ್ರಮಕ್ಕೆ ಆಗ್ರಹ

    ಕೋಲಾರ: ರಾಜ್ಯದಲ್ಲಿ ೫.೨೫ ಲಕ್ಷ ನೌಕರರನ್ನು ಪ್ರತಿನಿಧಿಸುತ್ತಾ ನೌಕರರ ಕ್ಷೇಮಾಭಿವೃದ್ದಿಗಾಗಿ ಸಂಕಲ್ಪದೊಂದಿಗೆ ದುಡಿಯುತ್ತಿರುವ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರುಗಳ ವಿರುದ್ದ ನಕಲಿ ದಾಖಲೆ ಸೃಷ್ಟಿಸಿ ಸಂಘದ ಘನತೆಗೆ ಹಾನಿ ಮಾಡಿ, ತೇಜೋವಧೆಗೆ ಕಾರಣರಾಗಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಾಣಿಕ್ಯಾಳ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

    ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ವಾಣಿಜ್ಯ, ಕೈಗಾರಿಕಾ ಇಲಾಖೆ ಅಧೀನ ಕಾರ್ಯದರ್ಶಿ ಶಾಂತಾರಾಮ, ಬೆಂಗಳೂರಿನ ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರಿನ ಜಾನುವಾರು ಅಭಿವೃದ್ದಿ ಅಧಿಕಾರಿ ಎಂ.ಮೆಹಬೂಬ್ ಪಾಷಾ, ಬೆಂಗಳೂರಿನ ಭೂಮಾಪನಾ ಇಲಾಖೆ ಸೂಪರ್‌ವೈಸರ್ ವಿ.ವಿ.ಶಿವರುದ್ರಯ್ಯ, ರಾಮನಗರ ತಾಲ್ಲೂಕು ಅವ್ವೇನಹಳ್ಳಿ ಉಪನ್ಯಾಸಕ ನಿಂಗೇಗೌಡ್ರು ಇವರು ರಾಜ್ಯದ ೫ ಲಕ್ಷ ನೌಕರರನ್ನು ಪ್ರತಿನಿಧಿಸುವ ಸಂಘದ ತೇಜೋವಧೆಗೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಂಘವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ, ಇವರ ವಿರುದ್ದ ಕಾನೂನು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.

    ಹಗಲು-ರಾತ್ರಿಯೆನ್ನದೇ ನೌಕರರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ರಾಜ್ಯಾಧ್ಯಕ್ಷರು, ಜಿಲ್ಲೆ,ತಾಲ್ಲೂಕು, ಯೋಜನಾ ಶಾಖೆಯ ಪದಾಧಿಕಾರಿಗಳ ಮೇಲೆ ದುರುದ್ದೇಶಪೂರಿತವಾಗಿ ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿ ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಸುಳ್ಳು ದೂರು ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದು, ಇವರ ವಿರುದ್ದ ಕ್ರಮಕೈಗೊಳ್ಳಲು ಒತ್ತಾಯಿಸಿದರು.

    ಕೋವಿಡ್ ಸೋಂಕಿನಿಂದ ಮೃತ ನೌಕರರಿಗೆ ೩೦ ಲಕ್ಷ ಪರಿಹಾರ, ಪ್ರಭಾರ ಭತ್ಯೆ ಏರಿಕೆ ಜತೆಗೆ ಸಾಮಾಜಿಕ ಕಳಕಳಿಯಿಂದ ಕೋವಿಡ್ ನಿಧಿಗೆ ಒಂದು ದಿನದ ವೇತನ ಅರ್ಪಣೆ, ಪುಣ್ಯಕೋಟಿ ಯೋಜನೆಗೆ ನೆರವಾಗಿದ್ದು, ಕಸಾಪ ಸಮ್ಮೇಳನಕ್ಕೆ ನೆರವು, ನೌಕರರ ಮಕ್ಕಳನ್ನು ಪ್ರೋತ್ಸಾಹಿಸಲು ೭ ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೌಕರರ ವೇತನ ಹೆಚ್ಚಳ ಹೀಗೆ ಹಲವಾರು ಆದೇಶಗಳ ಜಾರಿಗೆ ರಾಜ್ಯಾಧ್ಯಕ್ಷರು ಕಾರಣರಾಗಿದ್ದಾರೆ ಎಂದರು.

    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಹಾಲಿ ಸಂಘದ ಲೆಕ್ಕಪರಿಶೋಧಕ ಅನಿಲ್, ಸರ್ವೇ ಇಲಾಖೆ ರವಿ, ಜೆಹೆಚ್‌ಎಂ ಚಂದ್ರಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts