More

    ಕಣ್ಣಿನ ಪರೀಕ್ಷೆಯ ಕ್ಯಾಂಪ್ ಆಯೋಜಿಸಿದ ಬೆಂಗಳೂರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ!

    ಬೆಂಗಳೂರು: ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರ ಮತ್ತು ಕಣ್ಣಿನ ಪರೀಕ್ಷೆಗಳನ್ನು ಆಯೋಜಿಸಲಾಗಿದೆ ಎಂದು ಕೇಳಿಬಂದಾಗ, ಹೆಚ್ಚಿನವರು ಇದನ್ನು ಸರ್ಕಾರ ಅಥವಾ ದೊಡ್ಡ ಎನ್‌ಜಿಒ ಪ್ರಾಯೋಜಿತ ಕಾರ್ಯಕ್ರಮ ಎಂದು ಯೋಚಿಸಬಹುದು. ಆದರೆ ಇಲ್ಲೊಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಣ್ಣಿನ ಪರೀಕ್ಷೆಗೆ ಕ್ಯಾಂಪ್​ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ದೃಷ್ಟಿ ತಪಾಸಣೆ ಶಿಬಿರದ ನಂತರ ಹಿಂದುಳಿದ ಮಕ್ಕಳಿಗೆ ಸೋಮವಾರ ನೀಡಿದ ಕನ್ನಡಕವನ್ನು 12ನೇ ತರಗತಿಯ ವಿದ್ಯಾರ್ಥಿ ರಮಣ ರಾಮಚಂದ್ರನ್ ವಿತರಿಸಿದರು. ರಮಣ, ಜೂನ್ 17 ರಂದು ಶಿಬಿರವನ್ನು ಆಯೋಜಿಸಿದ್ದು ಬೆಂಗಳೂರು ಮೂಲದ ಸಖುಮ್ವಿಟ್ ಟ್ರಸ್ಟ್‌ ಸಹಕರಿಸಿದ್ದರು.

    ಸುದ್ದಿಗಾರರೊಂದಿಗೆ ಮಾತನಾಡಿದ ರಮಣ, “ರಮಣ ಆಸ್ಪತ್ರೆಯಲ್ಲಿ ತಂತ್ರಜ್ಞಾನ-ಆಧಾರಿತ ಇಂಟರ್ನ್‌ಶಿಪ್ ಮಾಡುವಾಗ, ಕೆಲವೇ ಸೆಕೆಂಡುಗಳಲ್ಲಿ ರೋಗಿಗಳ ಕಣ್ಣುಗಳನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗುವ ಯಂತ್ರಗಳನ್ನು ನಾನು ನೋಡಿದ್ದೆ” ಎಂದಿದ್ದಾರೆ.

    ಇದನ್ನೂ ಓದಿ: ಕ್ಯಾಂಪ್‌ಗಳ ಅಭಿವೃದ್ಧಿಗೆ ಮೂಲ ಸೌಲಭ್ಯ- ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ.

    ಅವರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ ಟ್ರಸ್ಟ್‌ನಲ್ಲಿ ದೃಷ್ಟಿ ಸಮಸ್ಯೆಗಳಿರುವ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡಲು ಇದೇ ರೀತಿಯ ತಂತ್ರಜ್ಞಾನವನ್ನು ಬಳಸಲು ಆಸ್ಪತ್ರೆಯಲ್ಲಿ ಪಡೆದಿದ್ದ ಅನುಭವ ಸ್ಫೂರ್ತಿಯನ್ನು ನೀಡಿತ್ತು. ರಮಣ, ಪಾಠ ಮಾಡುವಾಗ ಕಂಪ್ಯೂಟರ್ ಬಳಸುವಾಗ ಮತ್ತು ಸ್ಕ್ರೀನ್​ಗಳನ್ನು ನೋಡುವಾಗ ಅನೇಕ ಮಕ್ಕಳು ಕಣ್ಣು ಹಾಯಿಸಬೇಕಾಗಿತ್ತು, ಸ್ಕ್ರೀನಿಂಗ್ ಶಿಬಿರ ನಡೆಸುವ ಬಗ್ಗೆ ಟ್ರಸ್ಟ್‌ನೊಂದಿಗೆ ಮಾತನಾಡಿ ಕಾರ್ಯಕ್ರಮ ಆಯೋಜಿಸಿದರು.

    ಸ್ಲಿಟ್ ಲ್ಯಾಂಪ್ ಕ್ಯಾಮೆರಾಗಳು ಮತ್ತು ಕಾರ್ನಿಯಲ್ ಮತ್ತು ವಕ್ರೀಭವನದ ಸಮಸ್ಯೆಗಳನ್ನು ಕ್ರಮವಾಗಿ ಪತ್ತೆಹಚ್ಚಲು ಬಳಸುವ ಅಟೋ-ರಿಫ್ರಾಕ್ಟೋಮೀಟರ್​ಗಳು ಸೇರಿದಂತೆ ಉಪಕರಣಗಳನ್ನು ಟೆಕ್ ಸ್ಟಾರ್ಟ್ಅಪ್ ಫೋರಸ್ ಹೆಲ್ತ್ ಒದಗಿಸಿದೆ. ಶಿಬಿರದ ಅಂಗವಾಗಿ 200ಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷಿಸಲಾಯಿತು, ಅದರಲ್ಲಿ ಸೋಮವಾರ 38 ಮಕ್ಕಳ ದೃಷ್ಟಿ ಸಮಸ್ಯೆಗಳನ್ನು ಸರಿಪಡಿಸಲು ಕನ್ನಡಕವನ್ನು ನೀಡಲಾಯಿತು. ಕನ್ನಡಕಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗಿದೆ.

    ಇದನ್ನೂ ಓದಿ: 25 ಕ್ಯಾಂಪ್‌ಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ; ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಹೇಳಿಕೆ

    ವಿದ್ಯಾರ್ಥಿ ರಮಣ, “ಇಂತಹ ಶಿಬಿರಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಜನರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಬಹುದು. ಇದು ಹಲವಾರು ಹಿಂದುಳಿದ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts