More

    ಮೇ 3ರವರೆಗೂ ಊಟ, ತಿಂಡಿ ವ್ಯವಸ್ಥೆ ಮುಂದುವರಿಸಲು ಶಾಸಕ ಮಂಜುನಾಥ್ ಸೂಚನೆ

    ಬಿಡದಿ: ಪುರಸಭಾ ವ್ಯಾಪ್ತಿಯಲ್ಲಿ ಕರೊನಾ ವೈರಾಣು ಸೋಂಕಿನ ಪರಿಸ್ಥಿತಿ ನಿರ್ವಹಣೆ ಕುರಿತು ಪುರಸಭೆ ಸಭಾಂಗಣದಲ್ಲಿ ಬುಧವಾರ ಶಾಸಕ ಎ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಯಿತು.

    ದೇಶದಲ್ಲಿ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಸಲಾಗಿದೆ. ಅಲ್ಲಿಯವರೆಗೂ ಪಡಿತರ ಚೀಟಿ ಇಲ್ಲದ ಅರ್ಹ ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೀಡುತ್ತಿರುವ ಊಟ, ತಿಂಡಿ ವ್ಯವಸ್ಥೆಯನ್ನು ಮುಂದುವರಿಸಿ, ಸರ್ಕಾರದ ಸವಲತ್ತು ಹಾಗೂ ಆಹಾರದ ಕಿಟ್‌ಗಳನ್ನು ಪೂರೈಸಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಮಂಜುನಾಥ್ ಸೂಚಿಸಿದರು.

    ಆಹಾರ ಕಿಟ್ ವಿತರಣೆ ಮಾಡುವಾಗ ಎಚ್ಚರ ವಹಿಸಬೇಕು. ಪುರಸಭೆಯ 23 ಸದಸ್ಯರಿಂದ ಆಯಾಯ ಭಾಗದ ಅರ್ಹ ಲಾನುಭವಿಗಳ ಪಟ್ಟಿ ಪಡೆದು ಅವರಿಂದಲೇ ವಿತರಣೆಗೆ ಮುಂದಾದರೆ, ಸೌಲಭ್ಯ ಪಡೆದವರು ಮತ್ತೆ ಪಡೆಯುವುದನ್ನು ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.

    ಪುರಸಭೆ ಸದಸ್ಯ ರಮೇಶ್‌ಕುಮಾರ್ ಮಾತನಾಡಿ, ಕರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಮುಗಿಯುವ ದಿನವನ್ನು ಲೆಕ್ಕಹಾಕದೆ ನಿರ್ಗತಿಕರು, ಕೂಲಿಕಾರ್ಮಿಕರ ನೆರವಿಗೆ ಬರುವಂತೆ ದಾನಿಗಳ ಸಹಕಾರ ಕೋರಿದರೆ ಅಗತ್ಯ ಸಹಕಾರ ಸಿಗಲಿದೆ ಎಂದು ಸಭೆಗೆ ಸಲಹೆ ನೀಡಿದರು.

    ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಚೇತನ್ ಎಸ್. ಕೊಳವಿ, ಬಿಡದಿ ಸಬ್‌ಇನ್‌ಸ್ಪೆಕ್ಟರ್ ಭಾಸ್ಕರ್, ಉಪ ತಹಸೀಲ್ದಾರ್ ಮಂಜುನಾಥ್, ಪುರಸಭೆ ಸದಸ್ಯರಾದ ಲೋಕೇಶ್, ದೇವರಾಜು, ಮಹಿಪತಿ, ರಮೇಶ್, ರಜಿನಿ, ಪುಟ್ಟಮಾದಯ್ಯಇದ್ದರು.

    ಖಾಸಗಿ ವೈದ್ಯರಿಗೆ ನೋಟಿಸ್ ನೀಡಿ: ಖಾಸಗಿ ವೈದ್ಯರು ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸದಿರುವ ಬಗ್ಗೆ ದೂರುಗಳು ಬಂದಿವೆ. ಬಾಗಿಲು ಹಾಕಿರುವ ವೈದ್ಯರಿಗೆ ನೋಟೀಸ್ ನೀಡಿ, ಸ್ಪಂದಿಸದಿದ್ದಲ್ಲಿ ಉನ್ನತ ಅಧಿಕಾರಿಗಳಿಗೆ ವರದಿ ನೀಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಂಜುನಾಥ್ ಸೂಚನೆ ನೀಡಿದರು. ಹಾಗೂ ಪ್ರಾಥಮಿಕ ಸಮುದಾಯ ಕೇಂದ್ರಕ್ಕೆ ರೋಗಿಗಳಿಗೆ ನೆರಳು ಮತ್ತು ಕೂರಲು ಆಸ್ಪತ್ರೆ ಎದುರು ಶಾಮಿಯಾನದ ವ್ಯವಸ್ಥೆ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು.

     

    ಕರೊನಾ ಹಿನ್ನೆಲೆಯಲ್ಲಿ ನಗರದಿಂದ ಈ ಭಾಗಕ್ಕೆ ಹೆಚ್ಚಾಗಿ ಜನರು ಬಂದಿದ್ದಾರೆ. ಆದ್ದರಿಂದ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಚರಂಡಿ ಸ್ವಚ್ಛತೆ ಮತ್ತು ಾಗಿಂಗ್ ಮಾಡಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು.

    ಎ.ಮಂಜುನಾಥ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts