ಕುಕನೂರು: ಸಾಮೂಹಿಕ ವಿವಾಹ ಸಾಮಾಜಿಕ ಕಳಕಳಿಯ ಸಂಕೇತ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು. ತಾಲೂಕಿನ ಕುದರಿಮೋತಿಯಲ್ಲಿ ವಿಜಯಮಹಾಂತೇಶ್ವರ ಮೈಸೂರು ಸಂಸ್ಥಾನಮಠ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ನೆಲೆಗಟ್ಟಿನ ಆಧಾರದ ಮೇಲೆ ಕುದರಿಮೋತಿ ಮೈಸೂರು ಸಂಸ್ಥಾನ ಮಠ ಹಲವು ಮಹತ್ತರ ಕಾರ್ಯ ಮಾಡುತ್ತಿದೆ ಎಂದರು. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಅಕ್ಷರ, ಅನ್ನ, ಧಾರ್ಮಿಕ ದಾಸೋಹದ ಪ್ರತಿಬಿಂಬವಾಗಿ ಕುದರಿಮೋತಿ ಮಠ ಕಾರ್ಯ ಮಾಡುತ್ತಿದೆ. ಇಲ್ಲಿನ ಶ್ರೀಗಳು ವಿಚಾರವಂತರಾಗಿದ್ದಾರೆ ಎಂದರು.
ಇಳಕಲ್‌ನ ಚಿತ್ತರಗಿ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಮದುವೆಗಳಲ್ಲಿ ದಂಪತಿಗೆ ಅಕ್ಷತೆ ಕಾಳನ್ನು ಹಾಕುವ ಬದಲು ಪುಷ್ಪ ಹಾಕಬೇಕು ಎಂದರು. ಕುದರಿಮೋತಿ ಮೈಸೂರು ಸಂಸ್ಥಾನಮಠದ ಶ್ರೀ ವಿಜಯಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರಮಠದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಬಸವರಾಜ ಗಟ್ಟೆಪ್ಪನವರ್, ಹುಣಸಿಹಾಳದ ಶ್ರೀ ಶಾಂತವೀರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಜಿಪಂ ಸದಸ್ಯ ರಾಮಣ್ಣ ಚೌಡ್ಕಿ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಗ್ರಾಪಂ ಅಧ್ಯಕ್ಷ ಬಸವರಾಜ ಗಟ್ಟೆಪ್ಪನವರ್, ಯುವ ಮುಖಂಡ ನವೀನ ಕುಮಾರ ಗುಳಗಣ್ಣವರ್, ತಾಪಂ ಮಾಜಿ ಅಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ ಇತರರು ಇದ್ದರು.