More

    ರಂಜಾನ್​​​​ದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ, ತಬ್ಬಿಕೊಂಡು ಶುಭಾಶಯ ಹೇಳುವಂತಿಲ್ಲ: ವಕ್ಫ್​ ಬೋರ್ಡ್​​ ಸೂಚನೆ

    ಬೆಂಗಳೂರು: ಈ ಬಾರಿ ರಂಜಾನ್​ ಹಬ್ಬವನ್ನು ಅವರವರ ಮನೆಯಲ್ಲೇ ಆಚರಣೆ ಮಾಡಬೇಕು. ಯಾರೂ ಮಸೀದಿಗಳಿಗೆ ಬಂದು ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆಯೆಂದು ವಕ್ಫ್​ ಬೋರ್ಡ್​ ಅಧ್ಯಕ್ಷ ಮೊಹಮ್ಮದ್​ ಯೂಸುಫ್​ ತಿಳಿಸಿದ್ದಾರೆ.

    ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅವರು, ಸೋಮವಾರ ರಂಜಾನ್​ ಹಬ್ಬ ಇದೆ. ಆದರೆ ಯಾರೂ ಲಾಕ್​ಡೌನ್ ನಿಯಮ ಉಲ್ಲಂಘನೆ ಮಾಡಬಾರದು. ಮನೆಗಳಲ್ಲೇ ಹಬ್ಬ ಆಚರಿಸಬೇಕು. ಸಾಮಾಜಿಕ ಅಂತರ ನಿಯಮ ಪಾಲನೆ ಅಗತ್ಯ. ಮಸೀದಿ ಮತ್ತು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ!

    ಹಾಗೇ, ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭಾಶಯ ಕೋರಬಾರದು. ಕೈಕೊಟ್ಟು ಹಬ್ಬದ ಶುಭಾಶಯ ಹೇಳುವುದೂ ತಪ್ಪು. ಮಸೀದಿಯಲ್ಲಿಯೇ ಇರುವ ಮೌಲ್ವಿಗಳು ಮಾತ್ರ ಅಲ್ಲಿ ಪ್ರಾರ್ಥನೆ ಮಾಡಬಹುದು ಎಂದಿದ್ದಾರೆ.

    ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವಕ್ಫ್ ಮಂಡಳಿಯಿಂದ ಸೂಚನೆ ನೀಡಲಾಗಿದೆ. ಕರೊನಾ ಎಂಬುದು ಪ್ರಪಂಚಕ್ಕೇ ಬಂದ ಮಾರಕ ರೋಗ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳೋದು ಕಡ್ಡಾಯ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ರಾಜ್ಯಕ್ಕೆ ಮಾರಕವಾಯ್ತು ‘ಮುಂಬೈ’; ಅರ್ಧದಿನದಲ್ಲಿ 196 ಹೊಸ ಕೇಸ್​​, ಯಾದಗಿರಿಯಲ್ಲೇ ಅತಿ ಹೆಚ್ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts