More

    ಅಂತರಂಗದಲ್ಲಿ ಭಾವನೆಗಳ ಮೌಲ್ಯವೇ ಕಾವ್ಯ

    ಶೃಂಗೇರಿ: ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಮೌಲ್ಯವೇ ಕಾವ್ಯ ಎಂದು ಕವಿಯತ್ರಿ ಸವಿತಾ ನಾಗಭೂಷಣ ಹೇಳಿದರು.
    ಜೆಸಿಬಿಎಂ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕಲಾ ಸಂಘದಿಂದ ಆಯೋಜಿಸಿದ್ದ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿ, ತನ್ನೊಳಗಿನ ಅನುಭವತೆಗಳಿಗೆ ಮೂರ್ತರೂಪ ನೀಡಿ ಪದಗಳ ಜೋಡಣೆಗಳ ಜತೆಗೆ ಸಮಾಜಕ್ಕೆ ಉನ್ನತ ಸಂದೇಶ ನೀಡುವುದು ಕಾವ್ಯದ ಪ್ರಮುಖ ಉದ್ದೇಶ ಎಂದರು.
    ಪ್ರಕೃತಿಯನ್ನು ನಾವು ವಿಶಾಲವಾದ ದೃಷ್ಠಿಕೋನದಿಂದ ನೋಡಬೇಕು. ಪ್ರಕೃತಿಯಿಂದ ನಾವು ಕಲಿಯುವುದು ಬಹಳಷ್ಟಿದೆ. ಪ್ರೀತಿ ಇದ್ದರೆ ಕಾವ್ಯ ಬೆಳಗುತ್ತದೆ. ಕವಿತೆಗಳು ಸಮಾಜಕ್ಕೆ ಚಿಕಿತ್ಸೆ ನೀಡಬೇಕು. ಆಗ ಕವಿ ಸಮಾಜದ ಗೌರವಕ್ಕೆ ಪಾತ್ರನಾಗುತ್ತಾನೆ ಎಂದರು.
    ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಕೆ.ಪಿ.ಪ್ರಕಾಶ್ ಮಾತನಾಡಿ, ಕವಿ ಎಲ್ಲ ಕಾಲದಲ್ಲೂ ಸಲ್ಲುವನು. ಸಾಹಿತ್ಯದ ಅಧ್ಯಯನದಿಂದ ನಮ್ಮ ಚಿಂತನೆಗಳು ಬೆಳೆಯುತ್ತದೆ. ಮೊಬೈಲ್ ಯುಗದಲ್ಲಿ ಯುವಪೀಳಿಗೆ ಸಾಹಿತ್ಯದಿಂದ ವಿಮುಕ್ತರಾಗುತ್ತಿರುವುದು ವಿಪರ್ಯಾಸ ಎಂದರು.
    ಪ್ರಾಚಾರ್ಯ ಡಾ.ಎಂ.ಸ್ವಾಮಿ ಮಾತನಾಡಿ, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸೃಜನಶೀಲತೆಗೆ ಕಾಲೇಜು ನಿರಂತರವಾಗಿ ಪರಿಶ್ರಮಿಸುತಿದೆ. ಸಾಹಿತ್ಯಾತ್ಮಕ ಬೆಳವಣಿಗೆಗೆ ಪೂರಕವಾದ ವಾತಾವರಣವಿದ್ದು, ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಈ ಮೂಲಕ ತಮ್ಮ ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿ ಕವಿತಾ ಸಂಕಲನವನ್ನು ಹೊರ ತಂದಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ. ಕ್ರಿಯಾಶೀಲತೆ ಎಂಬುದು ಯುವಪೀಳಿಗೆಯಲ್ಲಿ ನಿರಂತರ ವಾಹಿನಿಯಾಗಿ ಹರಿಯಬೇಕು ಎಂದರು.
    ಅಂಕುರ ಕವಿತಾ ಸಂಕಲನವನ್ನು ಸವಿತಾ ನಾಗಭೂಷಣ್ ಬಿಡುಗಡೆಗೊಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರಶ್ಮಿ ಸುರೇಶ್,ಐಕ್ಯೂಎಸಿ ಸಂಯೋಜಕ ಪ್ರೊ.ನಾಗಭೂಷಣ್, ಅಂಕುರ ಸಂಕಲನದ ಸಂಪಾದಕ ಶ್ರೀ ಲಕ್ಷ್ಮೀ ಕಿಶೋರ್ ಅರಸ್, ಕಲಾಸಂಘದ ಅಧ್ಯಕ್ಷ ಸಚಿನ್.ಎಚ್.ವಿ, ಉಪಾಧ್ಯಕ್ಷ ಶರತ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts