More

    ಅನುಭವ ಮಂಟಪ ನಮ್ಮೆಲ್ಲರಿಗೂ ಆದರ್ಶವಾಗಲಿ

    ಕಡೂರು: 12ನೇ ಶತಮಾತನದಲ್ಲಿ ಅನುಭವ ಮಂಟಪದೊಂದಿಗೆ ಎಲ್ಲ ವಿಚಾರಗಳಿಗೆ ಸಮಾನ ವೇದಿಕೆ ಕಲ್ಪಿಸುವ ಮೂಲಕ ಧಾರ್ಮಿಕ ಕಾಂತ್ರಿ ನಡೆಸಿದ ಬಸವಣ್ಣನ ಮಾನವೀಯ ದೃಷ್ಠಿಯಿಂದ ನಿರ್ಮಿಸಿದ ಅನುಭವ ಮಂಟಪ ನಮ್ಮೆಲ್ಲರ ಆದರ್ಶವಾಗಬೇಕು ಎಂದು ಬೀರೂರು ರಂಭಾಪುರಿ ಶಾಖಾ ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಎಲ್ಲ ಸಮಾಜವನ್ನು ಒಂದೆಡೆ ಸೇರಿಸಿ ಕಾಯಕ ಜೀವಿಗಳನ್ನಾಗಿ ಮಾಡಿರುವ ಬಸವಣ್ಣನ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಶೋಷಿತ ಸಮಾಜದ ಅಭಿವೃದ್ಧಿ, ಸಮಾನತೆಗಾಗಿ ಮೂಢನಂಬಿಕೆಗಳನ್ನು ತೊಲಗಿಸಲು ಪಣತೊಟ್ಟಿದ್ದರು. ಕಾಯಕ ಮಾಡಿ ತಿನ್ನಬೇಕು ಎನ್ನುವುದು ಬಸವಣ್ಣನ ಮುಖ್ಯಗುರಿಯಾಗಿತ್ತು. ಈ ನಿಟ್ಟಿನಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
    ಶಾಂತಿ,ಆತ್ಮಜ್ಞಾನ ಹಾಗೂ ಸ್ವಾಸ್ಥ್ಯ ಸಮಾಜ ಅಕ್ಷಯವಾಗಲಿ ಎಂಬುದು ಅಕ್ಷಯ ತೃತೀಯ ದಿನದ ಸಂದೇಶ. ಅಂದೇ ಹುಟ್ಟಿದ ಬಸವಣ್ಣನವರೂ ಇದೇ ತತ್ವದ ತಳಹದಿ ಆಧಾರದಲ್ಲಿ ಶರಣ ಕ್ರಾಂತಿ ಮಾಡಿದರು. ಬೇರೆಯವರನ್ನು ಅರಿಯುವ ಮುನ್ನ ನಮ್ಮನ್ನು ನಾವು ಮೊದಲು ಅರಿತುಕೊಂಡರೆ ಸ್ವಯಂ ಜ್ಞಾನ ಸಿದ್ದಿಸುತ್ತದೆ. ವಿಶ್ವಗುರು ಬಸವಣ್ಣನವರು ಹಾಕಿದ ತಳಹದಿಯಲ್ಲಿ ರೂಪುಗೊಂಡಿರುವುದು ವೀರಶೈವ- ಲಿಂಗಾಯಿತ ಧರ್ಮ. ಶರಣ ತತ್ವವೇ ಈ ಧರ್ಮದ ಮೂಲ ಸಾರವಾಗಿದೆ ಎಂದರು.
    ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ತಾಲೂಕು ಅಧ್ಯಕ್ಷ ಟಿ.ಆರ್.ರೇಣುಕಪ್ಪ, ವೀರಶೈವ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಕಾಶ್‌ಮೂರ್ತಿ, ಡಾ. ಉಮೇಶ್, ಶಿವಪ್ರಕಾಶ್, ವಿಶ್ವನಾಥ್, ಸಾಣೇಹಳ್ಳಿ ರೇಣುಕಾರಾಧ್ಯ, ತಾರಾನಾಥ್, ಕಲ್ಮುರಡಪ್ಪ, ಜಿ.ಎಂ.ಯತೀಶ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts