More

    ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕಿ

    ಹನುಮಸಾಗರ: ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ ಎಂದು ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಹೇಳಿದರು.

    ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ

    ಯಲಬುಣಚಿ ಗ್ರಾಮದಲ್ಲಿ ಭಾನುವಾರ ಭಜರಂಗಿ ಯುವ ಸೇನೆ ಉದ್ಘಾಟನೆ, ಕನಕದಾಸ ಜಯಂತಿ, ಮಾರುತೇಶ್ವರ ಹಾಗೂ ಬಸವೇಶ್ವರ ಕಾರ್ತಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲು; 5 ಸೆಕೆಂಡುಗಳು ಇಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಮಾಡಿ

    ದುಂದುವೆಚ್ಚದ ಮದುವೆಗಳಿಂದ ಬಹಳಷ್ಟು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಸಾಲದಿಂದ ಮಕ್ಕಳ ಮದುವೆ ಮಾಡಿ ಗೋವಾ, ಮಂಗಳೂರು, ಬೆಂಗಳೂರು, ಶಿವಮೊಗ್ಗ, ದಾಂಡೇಲಿ ಸೇರಿ ವಿವಿಧೆಡೆ ದುಡಿಯಲು ಕುಟುಂಬಗಳು ಗುಳೆ ಹೋಗುವಂತಾಗಿವೆ. ಬಡ ಹಾಗೂ ಮಧ್ಯಮ ವರ್ಗದವರು ಅದ್ದೂರಿಯಾಗಿ ಮದುವೆಯಾಗಬಾರದು. ಸಾಮೂಹಿಕ ವಿವಾಹದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.

    ಸಾಮೂಹಿಕ ವಿವಾಹಗಳಲ್ಲಿ ಅನೇಕ ಸ್ವಾಮೀಜಿಗಳ ಹಾಗೂ ಗುರುಹಿರಿಯರ ಆಶೀರ್ವಾದ ದೊರೆಯುತ್ತದೆ. ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರ ಹಾಲು-ಜೇನಿನಂತೆ ಜೀವನ ಸಾಗಿಸುವುದಾಗಿದೆ. ಸತಿ-ಪತಿಗಳು ಒಬ್ಬರನೊಬ್ಬರು ಅರಿತುಕೊಂಡು ಸುಖವಾಗಿ ಸಂಸಾರ ನಡೆಸಬೇಕು. ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.

    ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ, ಯರನಾಳ ಶಿವಪ್ರಸಾದ ದೇವರು, ಶಿವಲಿಂಗಯ್ಯ ಗುರುವಿನ, ಚನ್ನವೀರಯ್ಯ ಹಿರೇಮಠ, ಅಂದಾನಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯರಾದ ಫಕೀರಪ್ಪ ಚಳಗೇರಿ, ಕೆ.ಮಹೇಶ, ಪುರಸಭೆ ಸದಸ್ಯ ಕಲ್ಲೇಶ ತಾಳದ, ಮುಖಂಡರಾದ ಮಹಾಂತೇಶ ಗಣವರಿ, ಮಲ್ಲಣ್ಣ ಪಲ್ಲೇದ, ಮಹಾಂತಯ್ಯ ಕೋಮಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts