More

    ಸಾಗುವಳಿ ಭೂಮಿಯ ಪಟ್ಟಾ ಕೊಡಿ; ಬಂಜಾರ ಸಂತ ಸೇವಾಲಾಲ್ ಸಂಘ ಪ್ರತಿಭಟನೆ

    ಮಸ್ಕಿ: ಹಲವಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ಬಂಜಾರು ಸಮುದಾಯದವರಿಗೆ ಪಟ್ಟಾ ನೀಡಬೇಕು ಮತ್ತು ತಾಂಡಾಗಳನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಬಂಜಾರ ಸಂತ ಸೇವಾಲಾಲ ಸಂಘದಿಂದ ಮಂಗಳವಾರ ತಹಸಿಲ್ ಕಚೇರಿ ಎದುರುಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

    ಸಂಘದ ತಾಲೂಕು ಅಧ್ಯಕ್ಷ ದೇವಪ್ಪ ರಾಠೋಡ್ ಮಾತನಾಡಿ, ಸರ್ಕಾರದ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಇತ್ತೀಚಿಗೆ ಅರಣ್ಯ ಇಲಾಖೆಯವರು ಸಾಗುವಳಿ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದೆ. ಸಾಗುವಳಿ ಮಾಡುವದನ್ನು ನಿಲ್ಲಿಸುವಂತೆ ತೊಂದರೆ ಕೊಡುತ್ತಿದ್ದಾರೆ. ಜಮೀನು ಸುತ್ತ ತಂತಿ ಬೇಲಿ ಹಾಕಲಾಗುತ್ತಿದೆ. ಇದರಿಂದಾಗಿ ಭೂಮಿ ಸಾಗುವಳಿ ಮಾಡುತ್ತಿದ್ದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಸಾಗುವಳಿ ಭೂಮಿಯನ್ನು ರೈತರ ಹೆಸರಿನಲ್ಲಿ ಪಟ್ಟಾ ನೀಡಬೇಕೆಂದು ಒತ್ತಾಯಿಸಿದರು.

    ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂದು ಹಲವು ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಇದುವರೆಗೂ ಕಂದಾಯ ಗ್ರಾಮಗಳನ್ನಾಗಿ ಪರಿಗಣಿಸಿಲ್ಲ. ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಮೂಲ ಸೌಕರ್ಯ ಕಲ್ಪಿಸಬೇಕು ಎಂದು ದೇವಪ್ಪ ರಾಠೋಡ್ ಆಗ್ರಹಿಸಿದರು. ಪ್ರಧಾನ ಕಾಂರ್ದರ್ಶಿ ವಿಠಲ್ ಕೆಳೂತ್, ಗೌರವ ಅಧ್ಯಕ್ಷ ಪೂಲಪ್ಪ ರಾಠೋಡ್, ಉಪಾಧ್ಯಕ್ಷ ಶೇಠಪ್ಪ, ಚಂದ್ರು ಮ್ಯಾದರಾಳ, ಬೋಜಪ್ಪ, ಹನುಮಂತ, ಶಂಕರಪ್ಪ, ವೆಂಕಟರಡ್ಡಿ, ಜಗನಪ್ಪ, ಖೇತಪ್ಪ ಪವಾರ, ಆನಂದ, ಮಾನಸಿಂಗ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts