More

    ವಿದ್ಯಾರ್ಥಿನಿ ಸಾವಿಗೆ ಕಾರಣರಾದವರ ಬಂಧಿಸಿ

    ಮಸ್ಕಿ: ಲಿಂಗಸುಗೂರಿನಲ್ಲಿ ವಿದ್ಯಾರ್ಥಿನಿ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ, ಬಂಜಾರ ಸಂತ ಸೇವಾಲಾಲ್ ಸಂಘಟನೆಯ ಪ್ರಮುಖರು ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಶೀಲ್ದಾರ್ ಷಣ್ಮುಖಪ್ಪಗೆ ಮನವಿ ಸಲ್ಲಿಸಿದರು.

    ಫೆ.3ರಂದು ಪ್ರಥಮ ಪಿಯು ವಿದ್ಯಾರ್ಥಿನಿ ಕಾಲೇಜಿನಿಂದ ನೇರವಾಗಿ ಹಾಸ್ಟೆಲ್ ಕೋಣೆಗೆ ಬಂದು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ. ಕಾಲೇಜಿನಲ್ಲಿ ನೀಡಿದ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಬಂಜಾರ ಸಮಾಜದ ಮುಖಂಡರಾದ ದೇವಪ್ಪ ರಾಥೋಡ, ವಿಠಲ ಕೆಳೂತ್, ಶೇಟಪ್ಪ ಜಾಧವ, ಶೇಟಪ್ಪ ಮೂಡಲದಿನ್ನಿ, ಹನುಮಂತ ಜಕ್ಕೇರಮಡು, ಭೀಮಸಿಂಗ್, ಶೇಖರಪ್ಪ, ನೀಲಪ್ಪ, ದುರಗಪ್ಪ ದೇಸಾಯಿ ಬೋಗಾಪುರ, ಶರಣಪ್ಪ ಇತರರಿದ್ದರು.

    ಸಮಾಜದ ಹದಿ-ಹರೆಯದ ಹೆಣ್ಣು ಮಕ್ಕಳ ಮೇಲೆ ಈ ತರಹದ ಲೈಂಗಿಕ ಕಿರುಕುಳ, ಅತ್ಯಾಚಾರ, ಅನ್ಯಾಯ ಮೇಲಿಂದ ಮೇಲೆ ನಡೆಯುತ್ತಿರುವುದು ಹೆಚ್ಚಿನ ವರದಿಯಾಗುತ್ತಿವೆ. ಇಂತಹ ಹೀನಕೃತ್ಯಗಳು ಸಮಾಜದಲ್ಲಿ ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ಳಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಅಗತ್ಯ ಪರಿಹಾರ ನೀಡಬೇಕು.
    | ಪ್ರತಿಭಟನಾಕಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts