More

    ಹಾಡುಹಗಲೇ ನಡೆಯಿತು ರಾಬರಿ: ಮಾಸ್ಕ್ ಧರಿಸಿದವರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ,ನಗದು ದೋಚಿದ್ರು!

    ಗುರುಗ್ರಾಮ: ಕರೊನಾ ಸೋಂಕು ತಡೆಯಲು ಮಾಸ್ಕ್ ಬಳಸಿ ಅಂದ್ರೆ ನಗ,ನಗದು ದೋಚುವುದಕ್ಕೂ ಮಾಸ್ಕ್ ಬಳಸಿದ್ರು ನೋಡಿ! ಕಳ್ಳರು ಮಾಸ್ಕ್ ಧರಿಸಿಕೊಂಡು ರೋಗಿಗಳಂತೆ ನಟಿಸುತ್ತ ಡಾಕ್ಟರ್ ದಂಪತಿಯ ಮನೆಗೆ ಹೋಗಿದ್ದರು. ಅವರನ್ನು ಬೆದರಿಸಿ ಅಲ್ಲಿದ್ದ 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ, ನಗದನ್ನು ದೋಚಿದ್ರು! ಗುರುಗ್ರಾಮದ ಅಪ್​ಸ್ಕೇಲ್ ಸೆಕ್ಟರ್ 40ರಲ್ಲಿ ಹಾಡುಹಗಲೇ ನಡೆದ ರಾಬರಿ ಇದು!

    ಹೋಮಿಯೋಪಥಿ ಡಾಕ್ಟರ್ ವೇದ ಪ್ರಕಾಶ್ ಟಂಡನ್ ಎಂಬುವವರ ಮನೆ ಕಂ ಕ್ಲಿನಿಕ್​ಗೆ ಮೂವರು ಮಾಸ್ಕ್ ಧಾರಿಗಳು ಆಗಮಿಸಿದ್ದರು. ಅವರಲ್ಲೊಬ್ಬ ರೋಗಿಯಂತೆ ನಟಿಸಿದ್ದ. ಡಾಕ್ಟರ್​ಗೆ ಏನೂ ಸಂದೇಹ ಬರಲಿಲ್ಲ. ಆತನ ಆರೋಗ್ಯ ಗಮನಿ ಔಷಧ ನೀಡಿ ಹೊರಡುವಂತೆ ಸೂಚಿಸಿದಾಗ ಆತ ಇನ್ನಿಬ್ಬರಿಗೆ ಒಳಗೆ ಬರುವಂತೆ ಸೂಚನೆ ನೀಡಿದ. ಡಾಕ್ಟರ್​ ಹಣೆಗೆ ಗನ್​ ಇಟ್ಟು, ಅವರ ಪತ್ನಿಯನ್ನೂ ಒಟ್ಟಿಗೆ ಕೂರಿಸಿ ನಗ,ನಗದನ್ನು ಅವರಿಂದಲೇ ತರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಇಷ್ಟೆಲ್ಲವೂ 40 ನಿಮಿಷದ ಅವಧಿಯಲ್ಲಿ ಆಗಿದೆ ಎಂದು ಕ್ರೈಂ ಬ್ರ್ಯಾಂಚ್ ಎಸಿಪಿ ಪ್ರೀತ್ ಪಾಲ್ ಸಿಂಗ್ ಸಂಗ್ವಾನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಬಿಜೆಪಿಗೆ ಸೇರಿ ಎಂದ ನೆಟ್ಟಿಗನಿಗೆ ಡ್ರೋನ್​ ಪ್ರತಾಪ್​ ನೀಡಿದ ಉತ್ತರ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬೋದು!

    ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಡಾಕ್ಟರ್ ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದವರನ್ನೆಲ್ಲ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಂಗ್ವಾನ್ ಹೇಳಿದ್ದಾರೆ. (ಏಜೆನ್ಸೀಸ್)

    ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್​ ಅವಶ್ಯಕತೆ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts