More

    ಇಮ್ರಾನ್ ಖಾನ್​ ಅವರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ- ಮರಿಯಂ ನವಾಜ್ ಪ್ರತಿಜ್ಞೆ

    ಕರಾಚಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಕರಾಚಿಯಲ್ಲಿ ಭಾನುವಾರ ವಿಪಕ್ಷ ಮೈತ್ರಿಕೂಟದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದ್ದ ವೇಳೆ 10,000ಕ್ಕೂ ಹೆಚ್ಚು ಜನ ಸೇರಿದ್ದರು. ಹನ್ನೊಂದು ಪಕ್ಷಗಳು ಒಟ್ಟಾಗಿ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್​ಮೆಂಟ್ (ಪಿಡಿಎಂ) ರಚಿಸಿಕೊಂಡಿದ್ದು, ಇದು ಎರಡನೇ ಪ್ರತಿಭಟನಾ ಸಭೆಯಾಗಿತ್ತು. ಇದಕ್ಕೂ ಮೊದಲು ಲಾಹೋರ್​ನಲ್ಲಿ ಪ್ರತಿಭಟನೆ ನಡೆದಿತ್ತು.

    ಇಮ್ರಾನ್​ ಖಾನ್ ಅವರನ್ನು ಪದಚ್ಯುತಗೊಳಿಸುವ ಉದ್ದೇಶದಿಂದ ಈ ಪ್ರತಿಭಟನೆಗಳು ನಡೆಯತ್ತಿವೆ. ದೇಶದ ಅರ್ಥವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ, ಮತ್ತು ಎಲ್ಲ ರೀತಿಯಲ್ಲೂ ನಿರ್ವಹಿಸುವಲ್ಲಿ ಖಾನ್ ಸೋತಿದ್ದಾರೆ ಎಂಬುದು ಆರೋಪ. ಈ ಪ್ರತಿಭಟನಾ ಸಭೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್​ (ಪಿಎಂಎಲ್​-ಎನ್​) ಉಪಾಧ್ಯಕ್ಷೆ ಮರಿಯಂ ನವಾಜ್ ಅವರು ಇಮ್ರಾನ್ ಖಾನ್ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಅಲ್ಲದೆ, ಇಮ್ರಾನ್​ ಖಾನ್ ಅವರನ್ನು ಜೈಲಿಗಟ್ಟದೆ ಬಿಡುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದ್ದಾರೆ.

    ಇದನ್ನೂ ಓದಿ: ಚುನಾವಣಾ ಕಣದಲ್ಲಿ ಡೊನಾಲ್ಡ್ ಟ್ರಂಪ್​ಗೆ ಹಿನ್ನಡೆ

    ಪ್ರತಿಭಟನಾ ಸಭೆಯಲ್ಲಿ ಮರಿಯಂ ಹೇಳಿದ್ದಿಷ್ಟು – “ನಿನ್ನೆ ನೀವು ಟಿವಿ ಸ್ಕ್ರೀನ್​ಗಳಲ್ಲಿ ಒಬ್ಬ ವ್ಯಕ್ತಿ ತನ್ನ ಸೋಲಿನ ಬಗ್ಗೆ ಅರಚುತ್ತಿದ್ದುದನ್ನು ನೋಡಿಯೇ ಇರುತ್ತೀರಿ. ಆ ವ್ಯಕ್ತಿಯನ್ನು ಜೈಲಿಗಟ್ಟದೇ ಬಿಡುವುದಿಲ್ಲ. ನೀವು (ಇಮ್ರಾನ್ ಖಾನ್​) ಜನರಿಗೆ ಘಬರಾನಾ ನಹೀ ಹೇ ಎಂದು ಹೇಳಿ. ನಿಮ್ಮ ಭೀತಿ ಪ್ರತಿ ಶಬ್ದದಲ್ಲೂ, ಪ್ರತಿ ನಡೆಯಲ್ಲೂ ನಿಮ್ಮೊಳಗಿನ ಹೆದರಿಕೆ ವ್ಯಕ್ತವಾಗುತ್ತಿದೆ. ನಿಮ್ಮ ಮುಖದಲ್ಲೂ ಇದನ್ನು ಕಾಣಲು ಜನ ಎದುರು ನೋಡುತ್ತಿದ್ದಾರೆ. ನಿಮಗೆ ಗೊತ್ತಿಲ್ಲ ಎಂದಾದರೆ ಯಾರಿಂದಲಾದರೂ ಕಲಿಯಬೇಕಿತ್ತು. ನವಾಜ್ ಷರೀಫ್ ಅವರಿಂದಲಾದರೂ ಕಲಿಯಬಹುದಿತ್ತು. ಅದನ್ನೂ ಮಾಡಲಿಲ್ಲ”.

    ಇದನ್ನೂ ಓದಿ: ಅನಿಸಿಕೆ: ಸಂಸ್ಕೃತ ಭಾಷೆಯ ಕಲಿಕೆಗೆ ತೆರೆದಿವೆ ಹಲವು ಬಾಗಿಲು

    ಮರಿಯಂ ಪತಿಯ ಬಂಧನ: ಮತಿಯಂ ನವಾಜ್ ಅವರ ಪತಿ ಸಫ್ದರ್ ಅವಾನ್ ಅವರನ್ನು ಪೊಲೀಸರು ನಿನ್ನೆ ಕರಾಚಿಯಲ್ಲಿ ಬಂಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮರಿಯಂ, ನಿನ್ನೆ ನಾನು ಕರಾಚಿಯ ಹೋಟೆಲ್​ನಲ್ಲಿ ತಂಗಿದ್ದಾಗ ಅಲ್ಲಿ ನನ್ನ ರೂಮಿನ ಬಾಗಿಲು ಮುರಿದು ಒಳ ನುಗ್ಗಿದ ಪೊಲೀಸರು ಪತಿ ಕ್ಯಾಪ್ಟನ್​ ಸಫ್ದರ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಹೈದರಾಬಾದ್​ನಲ್ಲಿ ಮತ್ತೆ ವರುಣಾಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts